ಪಾಕ್‌ ಮೇಲೆ ದಾಳಿ, ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಮೊದಲ ರಿಯಾಕ್ಷನ್‌, ಏನೆಲ್ಲ ಹೇಳಿದರು?

ಶಿವಮೊಗ್ಗ: ಆಪರೇಷನ್‌ ಸಿಂಧೂರ (Operation Sindoor) ಹೆಸರಿನಲ್ಲಿ ಕಳೆದ ರಾತ್ರಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಕಾರ್ಯಾಚರಣೆ ಕುರಿತು ಸಂಸದ ಬಿ.ವೈ.ರಾಘವೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಘವೇಂದ್ರ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

point-1ಪಹೆಲ್ಗಾಮ್‌ನಲ್ಲಿ ಉಗ್ರರು ದಾಳಿಗೆ 26 ಪ್ರವಾಸಿಗರು ಮೃತರಾಗಿದ್ದರು. ಈ ಕಾರಣಕ್ಕೆ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕವಾಗಿ ನಿರ್ಬಂಧ ವಿಧಿಸಿತ್ತು.

point-2ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮಧ್ಯರಾತ್ರಿ ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ.

point-3ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಇದೆ. ಭಾರತದ ಸೈನಿಕರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲಿದ್ದಾರೆ. ನಿನ್ನೆಯ ದಾಳಿಯಲ್ಲಿ ಸುಮಾರು 50 ರಿಂದ 70 ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ವರದಿಯಾಗುತ್ತಿದೆ.

Kalleshwara-Enterprises.webp

BY-Raghavendra-Speaks-about-Operation-sindoor.

point-4ಪಾಕಿಸ್ತಾನದ ಸೈನಿಕರ ಮೇಲೆ ದಾಳಿಯಾಗಿಲ್ಲ. ಗುಪ್ತಚರ ಮಾಹಿತಿ ಆಧರಿಸಿ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಯಾವುದೇ ಮಸೀದಿ, ನಾಗರಿಕರ ಮೇಲೆ ದಾಳಿಯಾಗಿಲ್ಲ.

JNNCE-ADMISSION-2025-26

point-5ಭಾರತದ ಸಂಸತ್ತಿನ ಮೇಲೆ ದಾಳಿ, ಏರ್‌ ಬೇಸ್‌ ಮೇಲೆ ದಾಳಿ ಸೇರಿದಂತೆ ಪದೇ ಪದೆ ದಾಳಿಗಳಾಗುತ್ತಿದೆ. ಶಾಂತಿ ಮಂತ್ರಿ ಪಠಿಸುತ್ತ ಕೂರುವ ಕಾಲ ಇದಲ್ಲ. ಹಾಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾಗಿದೆ.

point-6ಭಾರತದ ಸಿಂಧೂರ ಕಾಶ್ಮೀರ ಎಂದು ಹೇಳುತ್ತಲೆ ಬಂದಿದ್ದೇವೆ. ಕಳೆದ ಎರಡ್ಮೂರು ವರ್ಷದಿಂದ ಗೃಹ ಸಚಿವ ಅಮಿತ್‌ ಷಾ ಅವರು ಕಾಶ್ಮೀರವನ್ನು ಮರಳಿ ಪಡೆಯುವ ಕುರಿತು ಹೇಳಿಕೆಗಳನ್ನು ನೀಡಿದ್ದರು. ಈಗ ಅದಕ್ಕೆ ಸೂಕ್ತ ಸಂದರ್ಭ ಎದುರಾಗಿದೆ. ನಮ್ಮ ತಾಯಂದಿರು, ಸಹೋದರಿಯರ ಸಿಂಧೂರ ಉಳಿವಿಗಾಗಿ ಆಪರೇಷನ್‌ ಸಿಂಧೂರ ಆರಂಭಿಸಲಾಗಿದೆ.

The-Team-PU-College-scaled

point-7ಪಾಕಿಸ್ತಾನ ಯಾವಾಗಲು ಕಳ್ಳ ಹಾದಿಯಲ್ಲಿ ಬಂದು ಭಾರತದ ಮೇಲೆ ದಾಳಿ ನಡೆಸುತ್ತದೆ. ಆದರೆ ಭಾರತ ಪಾಕಿಸ್ತಾನದ ಯಾವುದೇ ನಾಗರಿಕರಿಗು ತೊಂದರೆ ಮಾಡಿಲ್ಲ. ಉಗ್ರರನ್ನು ಗುರಿಯಾಗಿಸಿಕೊಂಡು ಮಾತ್ರ ದಾಳಿ ನಡೆಸುತ್ತಿದೆ.

ಇದನ್ನೂ ಓದಿ » ಪಾಕ್‌ ಮೇಲೆ ದಾಳಿ, ಪಹಲ್ಗಾಮ್‌ನಲ್ಲಿ ಮೃತರಾದ ರಿಯಲ್‌ ಎಸ್ಟೇಟ್‌ ಉದ್ಯಮಿ ತಾಯಿಯ ಮೊದಲ ರಿಯಾಕ್ಷನ್‌, ಏನಂದ್ರು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment