ಸೊರಬ: ರಸ್ತೆಗೆ ದಿಢೀರ್ ಅಡ್ಡಬಂದ ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದೆ (bike accident). ಘಟನೆಯಲ್ಲಿ ನವವಿವಾಹಿತ ಸಾವನ್ನಪ್ಪಿದ್ದಾನೆ.
ಸೊರಬ ತಾಲ್ಲೂಕಿನ ಹರೂರು ಕೆರೆ ಏರಿ ಮೇಲೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಕುಂಶಿ ಗ್ರಾಮದ ರವಿ ರಾಮಪ್ಪ (29) ಮೃತಪಟ್ಟಿದ್ದಾರೆ.

ಇದನ್ನೂ ಓದಿ:
ಮಹಿಳೆ ಸಾವಿಗೆ ಕಾರಣವಾದ ಎಮ್ಮೆ, ಹೇಗಾಯ್ತು ಘಟನೆ?
ಕೂಲಿ ಕಾರ್ಮಿಕನಾಗಿದ್ದ ರವಿ ಕೆಲಸ ಮುಗಿಸಿಕೊಂಡು ಸಾಗರದಿಂದ ಹರೂರು ಮಾರ್ಗವಾಗಿ ಕುಂಶಿಗೆ ತೆರಳುವಾಗ ರಸ್ತೆಯಲ್ಲಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರವಿ ಅವರ ವಿವಾಹ ಏಪ್ರಿಲ್ 9ರಂದು ನಡೆದಿತ್ತು. ಘಟನೆ ಸಂಬಂಧ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ಮಧ್ಯೆ ಸಿದ್ದಾಪುರ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್

Soraba: Newlywed dies in bike accident. Ravi Ramappa (29) hit a dog, lost control & died on spot. #SorabaAccident #BikeCrash
