ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಭೀಕರ ಅಪಘಾತ, ಫೋಟೊಗ್ರಾಫರ್‌ ಕೊನೆಯುಸಿರು

ಶಿವಮೊಗ್ಗ: ನಿಂತಿದ್ದ ಗೂಡ್ಸ್‌ ವಾಹನಕ್ಕೆ ಕಾರು ಡಿಕ್ಕಿಯಾಗಿ (Car Mishap) ಫೋಟೊಗ್ರಾಫರ್‌ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಪಿಳ್ಳಂಗೆರೆ ಸಮೀಪ ಕಳೆದ ರಾತ್ರಿ ಘಟನೆ ಸಂಭವಿಸಿದೆ.

ಹೆಚ್‌.ಪಿ.ಚೇತನ್‌ (36) ಮೃತ ಫೋಟೊಗ್ರಾಫರ್‌. ಸ್ನೇಹಿತನೊಂದಿಗೆ ಕಾರಿನಲ್ಲಿ ಶಿವಮೊಗ್ಗದಿಂದ ತಮ್ಮೂರು ಭದ್ರಾವತಿ ತಾಲೂಕು ಹನುಮಂತಾಪುರಕ್ಕೆ ತೆರಳುವಾಗ ನಿಂತಿದ್ದ ಗೂಡ್ಸ್‌ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಚೇತನ್‌ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ.

ಚೇತನ್‌ ಸ್ನೇಹಿತ ಶಿವು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನು, ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್‌ ವಾಹನ ಪಲ್ಟಿಯಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Car-mishap-near-Pillanagiri

Car-mishap-near-Pillanagiri

ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪೈಲೆಟ್‌ ತರಬೇತಿ ಸಂಸ್ಥೆ, ಕನ್ನಡಿಗರಿಗೆ ಶೇ.25ರಷ್ಟು ಸೀಟ್‌, ಶುಲ್ಕ ವಿನಾಯಿತಿ

Car-mishap-near-Pillanagiri

Leave a Comment