ಭದ್ರಾ ಎಡದಂಡೆ ನಾಲೆ, ಮುಂಗಾರು ಹಂಗಾಮಿನ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ, ಕಾರಣವೇನು?

ಭದ್ರಾವತಿ: ಭದ್ರಾ ಎಡದಂಡೆ ನಾಲೆಗೆ ಹೊಸ ಗೇಟ್‌ (Gate) ಅಳವಡಿಸಲು ಇನ್ನೂ ಒಂದೂವರೆ ತಿಂಗಳು ಕಾಲವಕಾಶ ಬೇಕಿದೆ. ಆದ್ದರಿಂದ ಮುಂಗಾರು ಹಂಗಾಮಿನಲ್ಲಿ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ. ಎಡದಂಡೆ ನಾಲೆ ವ್ಯಾಪ್ತಿಯ ರೈತರು ಮುಂಗಾರು ಭತ್ತ ಸೇರಿದಂತೆ ಹೆಚ್ಚು ನೀರು ಅವಲಂಬಿಸುವ ಬೆಳೆ ಬೆಳೆಯದಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್‌ ಅಳವಡಿಸಬೇಕಿದೆ. ಕಾರ್ಯಪಾಲಕ ಇಂಜಿನಿಯರ್ ವರದಿಯಂತೆ ಗೇಟ್‌ ಅಳವಡಿಕೆಗೆ ಅಂದಾಜು ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಹಾಗಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಎಡದಂಡೆ ನಾಲೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ.

Bhadra-Dam-General-Image.

ಭದ್ರಾ ಜಲಾಶಯದ ಎಡದಂಡೆ ನಾಲೆಯ ವ್ಯಾಪ್ತಿಗೆ ಒಳಪಡುವ ರೈತರು ಈ ನಾಲೆಯ ನೀರನ್ನು ಅವಲಂಬಿಸಿ ಭತ್ತ ಅಥವಾ ಇನ್ಯಾವುದೇ ಹೆಚ್ಚು ನೀರು ಅವಲಂಬಿತ ಬೆಳೆಗಳನ್ನು ಬೆಳೆಯಬಾರದು. ಒಂದು ವೇಳೆ ಬೆಳೆಗಳನ್ನು ಬೆಳೆದು ನಾಲೆಯಿಂದ ನೀರು ಸಿಗದೆ ಬೆಳೆ ನಷ್ಟವಾದಲ್ಲಿ ನೀರಾವರಿ ಇಲಾಖೆ ಜವಾವಾಬ್ದಾರಿಯಲ್ಲ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ » ಆಗುಂಬೆ ಘಾಟಿ ಸಮೀಪ ಧರೆಗುರುಳಿದ ಮರ, ಕೆಲಕಾಲ ಹೆದ್ದಾರಿ ಬಂದ್

Kalleshwara-Enterprises.webp

https://chat.whatsapp.com/JPJ0lTQsTKf365Fqu6Q7cd

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment