ಸೂಜಿ ಗಾತ್ರದ ರಂಧ್ರದಲ್ಲಿ ಆಪರೇಷನ್‌ ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಏನಿದು ಶಸ್ತ್ರಚಿಕಿತ್ಸೆ? ಹೇಗಿತ್ತು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ರಕ್ತನಾಳದಲ್ಲಿ ರಂಧ್ರವಾಗಿ ರಕ್ತಸ್ರಾವವಾಗಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಸೂಜಿ ಗಾತ್ರದ ರಂಧ್ರದ ಮೂಲಕ ಶಸ್ತ್ರಚಿಕಿತ್ಸೆ (Operation) ನಡೆಸಲಾಗಿದೆ. ಒಂದೇ ದಿನದಲ್ಲಿ ಮಹಿಳೆ ಗುಣವಾಗಿ ಮನೆಗೆ ಮರಳಿದ್ದಾರೆ. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಇಂತಹ ಚಿಕಿತ್ಸೆ ನೀಡಲಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆ ವೈದ್ಯರು, ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಆಧುನಿಕ ಇಂಟರ್‌ವೆನ್ಷನಲ್‌ ತಂತ್ರಜ್ಞಾನಿಂದ ಸ್ಪ್ಲೆನಿಕ್‌ ಆರ್ಟರಿ ಎಂಬೋಲೈಸೇಶನ್‌ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.

Nanjappa-Hospital-Doctors-Cancer-operation

ಆಹಾರ ಸೇವಿಸಲಾಗದೆ ಸಂಕಷ್ಟ

ಹಾವೇರಿಯ 57 ವರ್ಷದ ಶಾರದಾ ಎಂಬುವವರಿಗೆ ಆಹಾರ ನುಂಗಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿದ್ದರು. ಪರೀಕ್ಷಿಸಿದಾಗ ಅನ್ನನಾಳದ ಕ್ಯಾನ್ಸರ್‌ ಇರುವುದು ಗೊತ್ತಾಗಿತ್ತು. ಕ್ಯಾನ್ಸರ್‌ ಚಿಕಿತ್ಸಕರಾದ ಡಾ. ನಮ್ರತಾ ಉಡುಪ 4 ಸೈಕಲ್‌ ಕಿಮೋಥೆರಪಿ ಮಾಡಿ, ಕ್ಯಾನ್ಸರ್‌ ಗಡ್ಡೆ ಕುಗ್ಗಿಸಿದರು. ಬಳಿಕ 6 ತಾಸು ಶಸ್ತ್ರಚಿಕಿತ್ಸೆ ನೆರವೇರಿಸಿದ ಕ್ಯಾನ್ಸರ್‌ ಶಸ್ತ್ರಚಿಕಿತ್ಸಕರಾದ ಡಾ. ಗುರುಚನ್ನ, ಡಾ. ಅರವಿಂದನ್‌, ಅರವಳಿಕೆ ತಜ್ಞ ಡಾ. ಪ್ರವೀಣ್‌ ಕುಮಾರ್‌ ಅನ್ನನಾಳಕ್ಕೆ ಅಂಟಿಕೊಂಡಿದ್ದ ಅನ್ನನಾಳಕ್ಕೆ ಅಂಟಿಕೊಂಡಿದ್ದ ಶ್ವಾಸಕೋಶ ಭಾಗವನ್ನು ತೆಗೆದು ಎದೆಯ ಭಾಗಕ್ಕೆ ಜೋಡಿಸಿದ್ದರು.

Nanjappa-Hospital-Doctors-Cancer-operation

ಮಹಿಳೆಗೆ ಊಟ ಮಾಡಲು, ನೀರು ಕುಡಿಯಲು ಆಗದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಅನ್ನನಾಳದ ಕ್ಯಾನ್ಸರ್ ಇರುವುದು ಧೃಡವಾದ ಹಿನ್ನೆಲೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಈ ರೀತಿಯ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ರೋಗಿಗೆ ರಕ್ತ ಹೆಪ್ಪುಗಟ್ಟದೆ ಇರಲು ಇಂಜೆಕ್ಷನ್ ಹಾಗೂ ಔಷಧ ನೀಡಿ, ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಆರು ದಿನದ ನಂತರ ಮಹಿಳೆ ಸುಸ್ತು, ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಬಂದರು.ಡಾ.ಅರವಿಂದನ್, ಕ್ಯಾನ್ಸರ್‌ ಶಸ್ತ್ರಚಿಕಿತ್ಸಕ

Nanjappa-Hospital-Doctors-Cancer-operation

ಸೂಜಿ ಗಾತ್ರದ ರಂಧ್ರದಲ್ಲಿ ಶಸ್ತ್ರಚಿಕಿತ್ಸೆ 

Imageಆಸ್ಪತ್ರೆಗೆ ಬಂದಾಗ ಮಹಿಳೆಯ ಹಿಮೊಗ್ಲೋಬಿನ್ ಪ್ರಮಾಣ 5ರಷ್ಟಿತ್ತು. ಸಿ.ಟಿ ಸ್ಕ್ಯಾನ್ ಮಾಡಿದಾಗ ಸ್ಪ್ಲೀನ್‌ಗೆ ಸಂಚರಿಸುವ ರಕ್ತನಾಳದಲ್ಲಿ ಸಣ್ಣ ರಂಧ್ರವಾಗಿ, ತೀವ್ರ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ಈಗಾಗಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ತಕ್ಷಣ ಅವರಿಗೆ ರಕ್ತ ನೀಡಲಾಯಿತು ಎಂದು ಡಾ. ಅರವಿಂದನ್‌ ತಿಳಿಸಿದರು.

ಶಸ್ತ್ರಚಿಕಿತ್ಸೆ ಇಲ್ಲದೆ ತೊಡೆಯ ರಕ್ತನಾಳದ ಮೂಲಕ ಸೂಜಿ ಗಾತ್ರದ ಸಾಧನ ಬಳಸಿ ರಕ್ತಸ್ರಾವವಾಗುತ್ತಿರುವ ನಾಳ ಮುಚ್ಚುವುದು ಆಧುನಿಕ ಮತ್ತು ಅಪಾಯ ಕಡಿಮೆ ಇರುವ ಚಿಕಿತ್ಸೆಯಾಗಿದೆ. ಆಸ್ಪತ್ರೆಯ ಡಾ.ನಿಶಿತಾ ಈ ಚಿಕಿತ್ಸಾ ವಿಧಾನದಲ್ಲಿ ಪರಿಣತರಿದ್ದು, ಕಾಯ್ಲಿಂಗ್, ಎಂಬೋಲೈಸ್ ವಿಧಾನದ ಮೂಲಕ ರಕ್ತಸ್ರಾವ ಸ್ಥಗಿತಗೊಳಿಸಿದರು. ಆಗ ರೋಗಿಯ ಹೊಟ್ಟೆನೋವು ಕಡಿಮೆಯಾಯಿತು. ಮರುದಿನ ರೋಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದರು. ಅವರಿಗೆ ವಿಕಿರಣ ಚಿಕಿತ್ಸೆ ಮುಂದುವರೆಸಲಾಗುವುದು ಎಂದರು.

Nanjappa-Hospital-Doctors-Cancer-operation

ಸ್ಪ್ಲೀನ್‌ಗೆ ಹಲವು ಕಡೆಗಳಿಂದ ರಕ್ತ ಸರಬರಾಜು ಆಗುತ್ತದೆ. ರೋಗಿಗೆ ಸುಡೋ ನ್ಯೂರಿಸಮ್‌ನಿಂದ ಸ್ಪ್ಲೀನ್‌ನಲ್ಲಿ ರಕ್ತಸ್ರಾವವಾಗಿ ಹೊಟ್ಟೆಯಲ್ಲಿ ರಕ್ತ ತುಂಬಿತ್ತು. ಎಂಡೋವಾಸ್ಕುಲರ್ ಪದ್ಧತಿ ಬಳಸಿ ತೊಡೆಯ ರಕ್ತನಾಳದ ಮೂಲಕ ಸ್ಪ್ಲೀನ್‌ ಬಳಿ ಸಾಗಿ ಹೊಟ್ಟೆ ತಲುಪಲಾಯಿತು. ನಂತರ ಪಿನ್ ಹೋಲ್ ಮೂಲಕ ರಕ್ತಸ್ರಾವ ನಿಲ್ಲಿಸಲಾಯಿತು. ಚಿಕಿತ್ಸೆ ನೀಡುವ ವೇಳೆ ಅರಿವಳಿಕೆ ತಜ್ಞ ಡಾ.ಪ್ರವೀಣ್ ಕುಮಾರ್ ಬಹಳಷ್ಟು ಸಹಕಾರ ನೀಡಿದರು.ಡಾ.ನಿಶಿತಾ, ಇಂಟರ್‌ವೆನ್ಶನಲ್ ರೇಡಿಯಾಲಜಿಸ್ಟ್

Nanjappa-Hospital-Doctors-Cancer-operation

ತಂಬಾಕು ಬಳಕೆಯಿಂದ ಬಾಯಿಯಿಂದ ಗುದದ್ವಾರದವರೆಗೆ ಎಲ್ಲಿ ಬೇಕಾದರೂ ಕ್ಯಾನ್ಸರ್ ತಗುಲುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಾಮಾಜಿಕ ಅರಿವು ಮೂಡಿಸಬೇಕು.ಡಾ.ಗುರುಚನ್ನ, ಕ್ಯಾನ್ಸರ್ ಶಸ್ತ್ರಚಿಕಿತ್ಸಕ

ರೇಡಿಯಾಲಜಿಸ್ಟ್ ಡಾ.ಶರತ್ ಚಂದ್ರ, ಅರಿವಳಿಕೆ ತಜ್ಞ ಡಾ. ಪ್ರವೀಣ್ ಕುಮಾರ್, ಕ್ಯಾನ್ಸರ್‌ ಚಿಕಿತ್ಸಕಿ ಡಾ.ನಮ್ರತಾ ಉಡುಪ ಮತ್ತಿತರರಿದ್ದರು.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿ.ಫಾರ್ಮಾ, ಡಿ.ಫಾರ್ಮಾ, ಪದವಿ ಮಾಡಿದವರಿಗೆ ಉದ್ಯೋಗವಕಾಶ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment