NEWS HIGHLIGHTS
ಶಿವಮೊಗ್ಗ: ಎನ್.ಆರ್.ಪುರಕ್ಕೆ ತೆರಳಲು ಶಿವಮೊಗ್ಗದಲ್ಲಿ KSRTC ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣ ಕಳ್ಳತನವಾಗಿದೆ. ₹1.75 ಲಕ್ಷ ಕಳ್ಳತನವಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.ಚಿಕ್ಕಮಗಳೂರು ಜಿಲ್ಲೆ ಕಡೂರಿನ ಪಾಲಾಕ್ಷಮ್ಮ ಎಂಬುವವರು ಎನ್.ಆರ್.ಪುರದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಮಗಳಿಗೆ ಕೊಡಲು ₹1.75 ಲಕ್ಷ ರೂ. ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶೃಂಗೇರಿಗೆ ತೆರಳುವ ಬಸ್ ಹತ್ತಿದ್ದರು.
ಸೀಟಿನಲ್ಲಿ ಕುಳಿತ ಪಾಲಾಕ್ಷಮ್ಮ ವ್ಯಾನಿಟಿ ಬ್ಯಾಗ್ ಮುಟಿದ್ದಾಗ ಅನುಮಾನ ಬಂದಿದೆ. ಪರಿಶೀಲಿಸಿದಾಗ ಹಣ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ವ್ಯಕ್ತಿಯ ಹತ್ಯೆ, ಕೆರೆ ಏರಿ ಬಳಿ ಮೃತದೇಹ ಪತ್ತೆ

