ಕೋಡಿ ಬಿತ್ತು ಅಂಜನಾಪುರ ಜಲಾಶಯ, ವಾಡಿಕೆಗೂ ಮೊದಲೇ ಭರ್ತಿ

ಶಿಕಾರಿಪುರ : ನಿರಂತರ ಮಳೆಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (DAM) ಭರ್ತಿಯಾಗಿ ಕೋಡಿ ಬಿದ್ದಿದೆ. ವಾಡಿಕೆಗು ಮೊದಲೇ ಜಲಾಶಯ ಭರ್ತಿಯಾಗಿದೆ.

ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಆದ್ದರಿಂದ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹಾಗಾಗಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ. 23 ಅಡಿ ನೀರು ತುಂಬಿ ಜಲಾಶಯ ಕೋಡಿ ಬಿದ್ದಿದೆ.

Anjanapura-Dam-full-in-2025.

ವಾಡಿಕೆಗು ಮೊದಲೆ ಭರ್ತಿ

ಅಂಜನಾಪುರ ಜಲಾಶಯ ಈ ಬಾರಿ ವಾಡಿಕೆಗಿಂತಲೂ ಮೊದಲೆ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಭರ್ತಿಯಾಗುತಿತ್ತು. ಕಳೆದ ವರ್ಷ ಜುಲೈ ಮಧ್ಯೆ ಭಾಗದಲ್ಲಿ ಕೋಡಿ ಬಿದ್ದಿತ್ತು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

dam

ಕೃಷಿ, ಕುಡಿಯುವ ನೀರಿನ ಮೂಲ

ಅಂಜನಾಪುರ ಜಲಾಶಯವು 1.82 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣಕ್ಕೆ ಇಲ್ಲಿಂದಲೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಅಲ್ಲದೆ 6,732 ಹೆಕ್ಟೇರ್‍ ಪ್ರದೇಶಕ್ಕೆ ನೀರುಣಿಸುತ್ತಿದೆ. ಹಾಗಾಗಿ ಜಲಾಶಯ ಭರ್ತಿಯಾಗುತ್ತಿದ್ದಂತೆ ಶಿಕಾರಿಪುರ ಜನತೆ ಹರ್ಷ ವ್ಯಕ್ತಪಡಿಸುತ್ತಾರೆ.

ಮೈಸೂರು ಮಹಾರಾಜರು 1936ರಲ್ಲಿ ಅಂಜನಾಪುರ ಜಲಾಶಯವನ್ನು ನಿರ್ಮಿಸಿದರು. 1600 ಮೀಟರ್ ಮಣ್ಣಿನ ಏರಿ ಹೊಂದಿದ್ದು, 21 ಅಡಿ ಎತ್ತರವಿದೆ. ಜಲಾಶಯ ಭರ್ತಿಯಾದ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಅಂಜನಾಪುರ ಜಲಾಶಯಕ್ಕೆ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ಭದ್ರಾ ಜಲಾಶಯದ ಒಳ ಹರಿವು ತುಸು ಹೆಚ್ಚಳ, ಇವತ್ತು ಎಷ್ಟಿದೆ?

ಹೆಚ್ಚಿನ Shimoga News, Shivamogga News ಮತ್ತು SHIKARIPURA ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜೂನ್ 25, 2025

Leave a Comment