ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಸಿದುಕೊಂಡು ಮನೆ ಬಾಗಿಲಿನ ಚಿಲಕ ಹಾಕಿ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ. ಶಿವಮೊಗ್ಗದ ವಿದ್ಯಾನಗರದ ಗಣಪತಿ ಲೇಔಟ್‌ನಲ್ಲಿ ಈಚೆಗೆ ಘಟನೆ ಸಂಭವಿಸಿದೆ.
ಮನೆಯೊಂದರ ಬಳಿ ಬಂದಿದ್ದ ಸುಮಾರು 35 ವರ್ಷದ ವ್ಯಕ್ತಿಯೊಬ್ಬ ಬಾಗಿಲು ಬಡಿದಿದ್ದಾನೆ. ಮನೆ ಮಾಲೀಕ ನಾಗರಾಜಪ್ಪ ಬಾಗಿಲು ತೆರೆದಾಗ, ‘ಸೈಟ್ ಮಾರಾಟಕ್ಕಿದೆಯೇʼ ಎಂದು ಆ ವ್ಯಕ್ತಿ ವಿಚಾರಿಸಿದ್ದ. ನಾಗರಾಜಪ್ಪ ಅವರು ‘ಯಾವುದೇ ಸೈಟ್ ಮಾರಾಟಕ್ಕಿಲ್ಲʼ ಎಂದು ತಿಳಿಸಿದ್ದರು.
ಒಳ ನುಗ್ಗಿ, ಚಿನ್ನದ ಚೈನ್ ಕಸಿದ
ಕೂಡಲೆ ಮನೆಯೊಳಗೆ ನುಗ್ಗಿದ ವ್ಯಕ್ತಿ, ಅನಾರೋಗ್ಯದಿಂದ ಹಾಸಿಗೆ ಮೇಲೆ ಮಲಗಿದ್ದ ನಾಗರಾಜಪ್ಪ ಅವರ ಪತ್ನಿ ರಾಜೇಶ್ವರಿ ಅವರ ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದಾನೆ. ನಾಗರಾಜಪ್ಪ ಅವರನ್ನು ತಳ್ಳಿ, ಮನೆಯಿಂದ ಹೋಗಿದ್ದಾನೆ. ಅಲ್ಲದೆ ಮನೆ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಸಿಗಂದೂರು ಸೇತುವೆ, ಎರಡನೇ ಹಂತದ ಲೋಡ್ ಟೆಸ್ಟ್ ಶುರು
ಕಳುವಾದ ಚಿನ್ನದ ಸರ 40 ಗ್ರಾಂ ತೂಕವಿದ್ದು, ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






