ಸಿಗಂದೂರು ಸೇತುವೆ, ಎರಡನೇ ಹಂತದ ಲೋಡ್‌ ಟೆಸ್ಟ್‌ ಶುರು

ಸಾಗರ: ಸಿಗಂದೂರು ಸೇತುವೆಯ ಎರಡನೇ ಹಂತದ ಲೋಡ್‌ ಟೆಸ್ಟ್‌ (Load Test) ಆರಂಭವಾಗಿದೆ. ಹಿಂದಿನ ಮಾದರಿಯಲ್ಲೇ ನೂರು ಟನ್‌ ಭಾರ ಹೊರಿಸಿ ವಿವಿಧ ಪರೀಕ್ಷೆ ನಡೆಸಲಾಗುತ್ತಿದೆ. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಅಂಬಾರಗೋಡ್ಲು – ಕಳಸವಳ್ಳಿ ಮಧ್ಯದ ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೇತುವೆಗೆ ಎರಡು ಹಂತದಲ್ಲಿ ಲೋಡ್‌ ಟೆಸ್ಟ್‌ ಮಾಡಬೇಕು ಎಂಬ ಷರತ್ತು ಇತ್ತು. ಅದರಂತೆ ಎರಡನೇ ಹಂತದ ಲೋಡ್‌ ಟೆಸ್ಟ್‌ ಆರಂಭವಾಗಿದೆ.

Load-test-at-sigandur-Bridge
ಫೋಟೊ ಕೃಪೆ: ಪ್ರೆಸನ್ನ ಕೆರೆಕೈ ಫೇಸ್‌ಬುಕ್‌

ಈಗ ನಡೆಯುತ್ತಿರುವುದು ಎಕ್ಸ್‌ಟ್ರಾ ಡೋಸ್ಡ್‌ ಕೇಬಲ್‌ ಟೆಸ್ಟ್‌. ಕೇಬಲ್‌ ಇರುವ ಭಾಗದಲ್ಲಿ ಮಾತ್ರ ಭಾರ ಹೊರಿಸಿ ಪರೀಕ್ಷೆ ನಡೆಸಲಾಗುತ್ತದೆ. ಕೇಬಲ್‌ ಇಲ್ಲದ ಸೇತುವೆ ಭಾಗದಲ್ಲಿ ಮೊದಲ ಟೆಸ್ಟ್‌ ನಡೆಸಲಾಗಿತ್ತು. ಸದ್ಯ ಲೋಡ್‌ ಟೆಸ್ಟ್‌ ನಡೆಯುತ್ತಿರುವುದರಿಂದ ಸೇತುವೆ ಮೇಲೆ ವಾಹನ, ಜನ ಸಂಚಾರ ನಿರ್ಬಂಧಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ » ಸಿಗಂದೂರು ಸೇತುವೆ, ಮೊದಲ ಲೋಡ್‌ ಟೆಸ್ಟ್‌ ಪಾಸ್‌, ಏನಿದು ಪರೀಕ್ಷೆ? ಹೇಗೆ ನಡೆಯುತ್ತೆ?

June-2025-Report-Shivamogga-Live

Load-test-at-sigandur-Bridge

Leave a Comment