ಹೊಸನಗರ: ತಾಲೂಕಿನಾದ್ಯಂತ ಉತ್ತಮ ಮಳೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಚಕ್ರಾ, ಸಾವೇಹಕ್ಲು ಭಾಗದಲ್ಲಿ ನೂರು ಮಿ.ಮೀಗಿಂತಲು ಹೆಚ್ಚಿನ ಮಳೆಯಾಗಿದೆ. (Rainfall Report)➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಹೊಸನಗರದ ಮಾನಿ ವ್ಯಾಪ್ತಿಯಲ್ಲಿ 68 ಮಿ.ಮೀ. ಮಳೆಯಾಗಿದೆ. ಯಡೂರಿನಲ್ಲಿ 60 ಮಿ.ಮೀ., ಹುಲಿಕಲ್‌ನಲ್ಲಿ 69 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 87 ಮಿ.ಮೀ., ಚಕ್ರಾದಲ್ಲಿ 155 ಮಿ.ಮೀ., ಸಾವೇಹಕ್ಲು ಭಾಗದಲ್ಲಿ 115 ಮಿ.ಮೀ. ಮಳೆಯಾಗಿದೆ.

ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳ ಹರಿವು ಹೆಚ್ಚಳವಾಗಿದೆ. ಮಾನಿ ಜಲಾಶಯಕ್ಕೆ 4136 ಕ್ಯೂಸೆಕ್ ಒಳ ಹರಿವು ಇದೆ. ಪಿಕಪ್ ಡ್ಯಾಂಗೆ 2351 ಕ್ಯೂಸೆಕ್ ಒಳ ಹರಿವು ಇದೆ. ಚಕ್ರಾ ಜಲಾಶಯಕ್ಕೆ 1673 ಕ್ಯೂಸೆಕ್, ಸಾವೇಹಕ್ಲು ಡ್ಯಾಂಗೆ 1828 ಕ್ಯೂಸೆಕ್ ಒಳ ಹರಿವು ಇದೆ.
ಇದನ್ನೂ ಓದಿ » ಶಿವಮೊಗ್ಗದ ಬಿದಿರೆಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮಾ

ಇದನ್ನೂ ಓದಿ:➤ ಲಿಂಗನಮಕ್ಕಿ ಡ್ಯಾಮ್ ನೀರಿನ ಮಟ್ಟ 3.90 ಅಡಿ ಹೆಚ್ಚಳ, ತುಂಗಾ ಡ್ಯಾಮ್ ಒಳಹರಿವು ಏರಿಕೆ, ಭದ್ರಾ ಸ್ಥಿತಿ ಹೇಗಿದೆ?