BREAKING NEWS – ಭದ್ರಾ ಜಲಾಶಯದ ಗೇಟುಗಳು ಓಪನ್, ಎಷ್ಟು ನೀರು ಹೊಳೆಗೆ ಹರಿಸಲಾಗ್ತಿದೆ?

ಭದ್ರಾವತಿ: ಭದ್ರಾ ಜಲಾಶಯದ (Dam) ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ಮೇಲೆತ್ತಿ ನದಿಗೆ ನೀರು ಹರಿಸಲಾಗುತ್ತಿದೆ. ಇಂದು ಸಂಜೆ ಗೇಟ್‌‌ಗಳನ್ನು ಮೇಲೆತ್ತಲಾಗಿದೆ.

ಕ್ರಸ್ಟ್ ಗೇಟ್‌ಗಳ ಮೂಲಕ 3300 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯಕ್ಕೆ 11 ಸಾವಿರ ಕ್ಯೂಸೆಕ್ ಒಳಹರಿವು ಇದೆ.

Bhadra-Dam-Water-Out-Flow

Bhadra Dam

ಭದ್ರಾ ಜಲಾಶಯವು ಗರಿಷ್ಠ 186 ಅಡಿ ನೀರಿನ ಸಂಗ್ರಹ ಮಟ್ಟ ಹೊಂದಿದೆ. ಸದ್ಯ 174 ಅಡಿಯಷ್ಟು ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಒಳಹರಿವು ಮತ್ತಷ್ಟು ಹೆಚ್ಚಳದ ನಿರೀಕ್ಷೆ ಇದೆ.

ಇದನ್ನೂ ಓದಿ » ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಬರಿಗಾಲಲ್ಲಿ ನಡಿಗೆ ಆರಂಭಿಸಿದ ಅರ್ಚಕ

June-2025-Report-Shivamogga-Live

Leave a Comment