ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ತೀರ್ಥಹಳ್ಳಿ: ತುರ್ತಾಗಿ ನಗದು ಬೇಕಿದ್ದು ಗೂಗಲ್ ಪೇ (Google Pay) ಮಾಡುವುದಾಗಿ ಅಂಗಡಿ ಮಾಲೀಕನಿಗೆ ನಂಬಿಸಿ ವಂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕು ತೂದುರಿನ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಶಿವಮೊಗ್ಗದ ವ್ಯಕ್ತಿಗೆ ಬೆಂಗಳೂರಿನ ಫೈನಾನ್ಸ್ ಸಂಸ್ಥೆಯಿಂದ ಬಂತು ಫೋನ್, ಆಮೇಲೆ ಕಾದಿತ್ತು ಬಿಗ್ ಶಾಕ್
ಜೂನ್ 27ರಂದು ಮಧ್ಯಾಹ್ನ ಕೆಂಪು ಕಾರಿನಲ್ಲಿ ಬಂದ ಗ್ರಾಹಕನೊಬ್ಬ ಬಟ್ಟೆ ಅಂಗಡಿಯಲ್ಲಿ ₹1100 ಬೆಲೆಯ ಒಳ ಉಡುಪು ಖರೀದಿಸಿದ್ದ. ತನಗೆ ₹20 ಸಾವಿರ ನಗದು ಅವಶ್ಯಕತೆ ಇದೆ. ಒಳ ಉಡುಪಿನ ದರ ಒಂದು ಸಾವಿರ ರುಪಾಯಿ ಮುರಿದುಕೊಂಡು ₹19 ಸಾವಿರ ನಗದು ಕೊಡಿ. ತಾನು ₹20 ಸಾವಿರ ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದ.

ಆತ ಹೇಳಿದಂತೆ ಅಂಗಡಿ ಮಾಲೀಕ (ಹೆಸರು ಗೌಪ್ಯ) ₹19 ಸಾವಿರ ನಗದನ್ನು ಆ ವ್ಯಕ್ತಿಗೆ ನೀಡಿದ್ದರು. ಆತ ₹20 ಸಾವಿರ ಗೂಗಲ್ ಪೇ ಮಾಡಿರುವುದಾಗಿ ತಿಳಿಸಿ ಅಂಗಡಿಯಿಂದ ಹೋಗಿದ್ದ. ಬಳಿಕ ಅಂಗಡಿ ಮಾಲೀಕ ತನ್ನ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ಬಂದಿರಲಿಲ್ಲ. ಆತನಿಗಾಗಿ ಹುಡುಕಾಡಿದ ಅಂಗಡಿ ಮಾಲೀಕ ತಡವಾಗಿ ದೂರು ನೀಡಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್‌ಡೇಟ್

About The Editor
ನಿತಿನ್ ಆರ್.ಕೈದೊಟ್ಲು















