ಶಿವಮೊಗ್ಗದ NH ಆಸ್ಪತ್ರೆಯಲ್ಲಿ ಸರ್ವೈವರ್ಸ್‌ ಕ್ಲಿನಿಕ್‌, ಜು.17ರಂದು ಕ್ಯಾನ್ಸರ್‌ ಬಗ್ಗೆ ಮಹತ್ವದ ಚರ್ಚೆ, ಏನಿದು ಕ್ಲಿನಿಕ್‌?

CLINIC

ಶಿವಮೊಗ್ಗ: ಕ್ಯಾನ್ಸರ್ ಗೆದ್ದವರಿಗಾಗಿ ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೆಡಿಕಲ್ ಅಂಕೂಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರು ಸರ್ವೈವರ್ಸ್‌ ಕ್ಲಿನಿಕ್ (Clinic) ಆರಂಭಿಸಿದ್ದಾರೆ. 

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಇದನ್ನೂ ಓದಿ » ಸಿಗಂದೂರು ಲಾಂಚ್‌ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್‌ಎ

ಜುಲೈ 17ರಂದು ಈ ಕ್ಲಿನಿಕ್ ನಡೆಯಲಿದೆ. ಮುಂದೆ ಪ್ರತಿ ತಿಂಗಳ 3ನೇ ಗುರುವಾರದಂದು ಕ್ಲಿನಿಕ್ ಇರಲಿದೆ. ಕ್ಯಾನ್ಸರ್ ರೋಗಿಗಳ ಚೇತರಿಕೆ ಹಾಗೂ ಆರೈಕೆ ದೃಷ್ಟಿಯಿಂದ ಕ್ಲಿನಿಕ್‌ ಆರಂಭಿಸಲಾಗಿದೆ. ಆರೋಗ್ಯಕರ ಜೀವನ, ಫಿಸಿಯೋಥೆರಪಿ ಮತ್ತು ಭಾವನಾತ್ಮಕ ಯೋಗಕ್ಷೇಮದಂತಹ ಪ್ರಮುಖ ವಿಷಯಗಳ ಕುರಿತು ತಜ್ಞರು ಮಾತನಾಡಲಿದ್ದಾರೆ.

Nanjappa Hospital Advertisement

Sahyadri-Narayana-Multispeciality-hospital-NH-Hospital.

ಜುಲೈ 17ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆವರಣದಲ್ಲಿ ಎಂಡೋಕ್ರೈನಾಲೋಜಿಸ್ಟ್ ಡಾ. ಸುಜನ್ ಆರ್.ಮುದದೇವಣ್ಣನವರ್, ‘ಕ್ಯಾನ್ಸರ್ ಚಿಕಿತ್ಸೆ ವೇಳೆ ಮಧುಮೇಹ ನಿರ್ವಹಣೆ: ಕ್ಯಾನ್ಸರ್ ಗೆದ್ದವರು ಮತ್ತು ರೋಗಿಗಳು ಏನು ತಿಳಿಯಬೇಕುʼ ಕುರಿತು ಮಾಹಿತಿ ನೀಡಲಿದ್ದಾರೆ. ಆಸಕ್ತರು ದೂರವಾಣಿ ಸಂಖ್ಯೆ 18003090309 ಸಂಪರ್ಕಿಸಿ ಅಥವಾ ಎನ್ ಎಚ್ ಕೇರ್ ಆಪ್ ಬಳಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment