ಹೊಸನಗರದ ಸಂಪೆಕಟ್ಟೆಯಲ್ಲಿ ಮದ್ಯದ ವಿಚಾರಕ್ಕೆ ರಾಡ್‌ನಿಂದ ಹಲ್ಲೆ, CCTVಯಲ್ಲಿ ದೃಶ್ಯ ಸೆರೆ, ಏನಿದು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಹೊಸನಗರ: ಮದ್ಯದ ವಿಚಾರವಾಗಿ ನಡುರಸ್ತೆಯಲ್ಲೇ ಯುವಕನೊಬ್ಬನ ಮೇಲೆ ಹಲ್ಲೆ (Attack) ನಡೆಸಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ರೈಲಿನ ಬೋಗಿಯಲ್ಲಿ ಬೆಂಕಿ

ಹೊಸನಗರ ತಾಲೂಕು ನಿಟ್ಟೂರು ಸಮೀಪದ ಸಂಪೆಕಟ್ಟೆ ಸರ್ಕಲ್‌ನಲ್ಲಿ ಘಟನೆ ನಡೆದಿದೆ. ಲಕ್ಷ್ಮೀಶ ಎಂಬಾತ ಗಾಯಗೊಂಡಿದ್ದು, ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಏನಿದು ಘಟನೆ? ಜಗಳಕ್ಕೇನು ಕಾರಣ?

ತುಂಬೆಗದ್ದೆ ಗ್ರಾಮದ ಲಕ್ಷ್ಮೀಶ ರಾತ್ರಿ 10 ಗಂಟೆ ಹೊತ್ತಿಗೆ ಸಂಪೆಕಟ್ಟೆಯ ಅಂಗಡಿಗೆ ತೆರಳಿದ್ದರು. ಈ ಸಂದರ್ಭ ಜೀಪಿನಲ್ಲಿ ಬಂದ ಸುಬ್ರಹ್ಮಣ್ಯ, ಅವಿನಾಶ, ರಾಘವೇಂದ್ರ ಎಂಬುವವರು ಮದ್ಯ ಕೊಡಿಸುವಂತೆ ಲಕ್ಷ್ಮೀಶನಿಗೆ ಹೇಳಿದರು. ಲಕ್ಷ್ಮೀಶ ನಿರಾಕರಿಸಿದಾಗ ಆತನ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Altercation-between-youths-at-Sampekatte-in-Hosanagara

ಜೀಪ್‌ನ ಟಯರ್‌ ಬಿಚ್ಚುವ ರಾಡ್‌ನಿಂದ ಲಕ್ಷ್ಮೀಶನ ತಲೆಗೆ ಹೊಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಾಯಗೊಂಡಿದ್ದ ಲಕ್ಷ್ಮೀಶನನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಸಂಬಂಧ ಹೊಸನಗರ ತಾಲೂಕು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

June-2025-Report-Shivamogga-Live-New-New.

Altercation-between-youths-at-Sampekatte-in-Hosanagara

Leave a Comment