ಶಿವಮೊಗ್ಗ ಲೈವ್
ಹೊಸನಗರ: ಡಿಸೇಲ್ (Diesel) ಖಾಲಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಹುಲಿಕಲ್ ಘಾಟಿ ತಿರುವಿನ ಸಮೀಪ ನಿಂತಿತ್ತು. ಇದರಿಂದ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಇದನ್ನೂ ಓದಿ » ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಆಟೋಗಳಿಗೆ ನಿಷೇಧ, ಕಾರಣವೇನು? ಈಗ ಹೇಗಿದೆ ವ್ಯವಸ್ಥೆ?
ಈ ಸುದ್ದಿಯನ್ನೂ ಓದಿ
ಶಿವಮೊಗ್ಗ ಸಿಟಿಯಲ್ಲಿ ಒಂದು ದಿನ ಮಾಂಸ ಮಾರಾಟ ನಿಷೇಧ, ಯಾವಾಗ? ಯಾಕೆ?
ಶಿವಮೊಗ್ಗ ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹುಲಿಕಲ್ ಘಾಟಿಯ ಮುಖ್ಯ ತಿರುವಿನಲ್ಲಿ ಡಿಸೇಲ್ ಖಾಲಿಯಾಗಿ ನಿಂತಿತ್ತು. ಘಾಟಿ ರಸ್ತೆ ಕಿರಿದಾಗಿದ್ದು ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾರು, ಸಣ್ಣ ಗೂಡ್ಸ್ ವಾಹನಗಳು ಮಾತ್ರ ಬಸ್ಸನ್ನು ದಾಟಿ ಹೋಗಲು ಸಾಧ್ಯವಾಗಿತ್ತು.
ಈ ಸುದ್ದಿಯನ್ನೂ ಓದಿ
ಹೊಸನಗರದ ಶಿಕ್ಷಕಿಗೆ ರಾಷ್ಟ್ರಪ್ರಶಸ್ತಿ, ಯಾರದು? ಮಿನಿಸ್ಟರ್ ಏನಂದ್ರು?

ಸ್ವಲ್ಪ ಹೊತ್ತಿನ ಬಳಿಕ ಮಾಸ್ತಿಕಟ್ಟೆಯಿಂದ ಡಿಸೇಲ್ ವ್ಯವಸ್ಥೆ ಮಾಡಲಾಯಿತು. ಬಹು ಹೊತ್ತು ನಡುರಸ್ತೆಯಲ್ಲೇ ಬಸ್ ನಿಂತಿದ್ದರಿಂದ ಹುಲಿಕಲ್ ಘಾಟಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.



