ವಿಮೆ ಸುದ್ದಿ: ಜೀವ ವಿಮೆ (Life Insurance) ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ವಿಭಿನ್ನ ಆರ್ಥಿಕ ಉದ್ದೇಶಗಳನ್ನು ಪೂರೈಸುವುದು ಇವುಗಳ ಗುರಿ. ವಿಮೆಯಿಂದ ಆರ್ಥಿಕ ರಕ್ಷಣೆ, ಉಳಿತಾಯ ಮತ್ತು ಹೂಡಿಕೆ ಅವಕಾಶಗಳು ದೊರೆಯಲಿವೆ.
ಯಾವೆಲ್ಲ ಬಗೆಯ ವಿಮೆಗಳಿವೆ?
1. ಅವಧಿ ವಿಮಾ ಯೋಜನೆ
- ಟರ್ಮ್ ಲೈಫ್ ಇನ್ಸುರೆನ್ಸ್ (Life Term Insurance) ಪಾಲಿಸಿಯು ನಿರ್ದಿಷ್ಟ ಅವಧಿಗೆ ಇರುತ್ತದೆ. ಸಾಮಾನ್ಯವಾಗಿ 10 ರಿಂದ 30 ವರ್ಷದವರೆಗೆ ರಕ್ಷಣೆ ನೀಡುತ್ತದೆ.
- ಈ ಅವಧಿಯಲ್ಲಿ ಪಾಲಿದಾರ ಮೃತರಾದರೆ ನಾಮ ನಿರ್ದೇಶಿತ ವ್ಯಕ್ತಿಗೆ (Nominee) ನಿರ್ದಿಷ್ಟ ಮೊತ್ತ ನೀಡಲಾಗುತ್ತದೆ.
- ಇದು ಉಳಿತಾಯ ಯೋಜನೆಯ ಪಾಲಿಸಿಯಲ್ಲ. ಆದರೆ ಅತ್ಯಂತ ಕೈಗೆಟಕುವ ಮತ್ತು ಕಡಿಮೆ ದರದ ಪ್ರೀಮಿಯಂ (Premium) ಹೊಂದಿರುತ್ತದೆ.

2. ಜೀವಮಾನ ವಿಮೆ ಪಾಲಿಸಿ
- ವಿಮೆಯಲ್ಲಿ ಜೀವಿತಾವಧಿ ಪೂರ್ತಿಯಾಗಿ ವಿಮೆಯ ರಕ್ಷಣೆ ಲಭಿಸಲಿದೆ. ಹಲವು ವಿಮೆಗಳಲ್ಲಿ ವಯೋಮಿತಿ ಇರುತ್ತದೆ. ಆದರೆ ಈ ಪಾಲಿಸಿಯಲ್ಲಿ ಆ ನಿಯಮವಿಲ್ಲ.
- ಪಾಲಿಸಿದಾದರು ಮೃತರಾದರೆ ನಾಮನಿರ್ದೇಶಿತ ವ್ಯಕ್ತಿ ವಿಮೆ ಮೊತ್ತವನ್ನು ಪಡೆಯಬಹುದಾಗಿದೆ.
- ಪಾಲಿಸಿದಾರರು ಜೀವಂತ ಇರುವಾಗಲೆ ವಿಮೆ ಮೊತ್ತವನ್ನು ಭಾಗಶಃ ಹಿಂಪಡೆಯಲು ಅವಕಾಶವಿದೆ. ಅಲ್ಲದೆ ವಿಮೆಯ ಮೇಲೆ ಸಾಲವನ್ನು ಪಡೆಯಲು ಅವಕಾಶವಿದೆ.
3. ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್ (ಯುಲಿಪ್)
- ಅಧಿಕ ಲಾಭವನ್ನು ನೀಡಬಹುದು ಅಥವಾ ಅಪಾಯವನ್ನು ಉಂಟು ಮಾಡುವ ಪಾಲಿಸಿ ULIP.
- ಪಾಲಿಸಿದಾರರು ತಮ್ಮ ಪ್ರೀಮಿಯಂ ಮೊತ್ತವನ್ನು ಬಾಂಡ್‌ಗಳು ಮತ್ತು ಷೇರುಗಳಲ್ಲಿ ತೊಡಗಿಸಬಹುದಾಗಿದೆ.
- ಮಾರುಕಟ್ಟೆಯ ಏರಿಳಿತಗಳ ಆಧಾರದಲ್ಲಿ ಆದಾಯ ನಿರೀಕ್ಷಿಸಬಹುದಾಗಿದೆ.
4. ಎಂಡೋಮೆಂಟ್ ಪಾಲಿಸಿ
- ಈ ಪಾಲಿಸಿಯಲ್ಲಿ ಹೂಡಿಕೆ ಮತ್ತು ವಿಮೆ ಎರಡು ಅವಕಾಶ ಇರಲಿದೆ.
- ನಿರ್ದಿಷ್ಟ ಅವಧಿಯ ಬಳಿಕ ಪಾಲಿಸಿ ಮೆಚುರಿಟಿಯಾಗಲಿದೆ. ಆಗ ಅಥವಾ ಪಾಲಿಸಿದಾ ಮೃತರಾದ ಬಳಿಕ ನಿಗದಿತ ಮೊತ್ತವನ್ನು ನೀಡುತ್ತದೆ.
- ಕೆಲವು ಪ್ಲಾನ್‌ಗಳಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಹಣ ಪಡೆಯಲು ಅವಕಾಶವಿದೆ.
5. ಮಕ್ಕಳ ವಿಮಾ ಯೋಜನೆ
- ಮಕ್ಕಳ ಭವಿಷ್ಯದ ಆರ್ಥಿಕ ಅಗತ್ಯ ಮತ್ತು ಹೂಡಿಕೆಗೆ ಅತ್ಯಂತ ಅನುಕೂಲ ಈ ವಿಮಾ ಯೋಜನೆ.
- ಮಕ್ಕಳು ವಯಸ್ಕರಾದ ನಂತರ ಮೊತ್ತವನ್ನು ಪಾವತಿಸಲಾಗುತ್ತದೆ.
ಇದನ್ನೂ ಓದಿ » ಮಕ್ಕಳ ಕಣ್ಣಿನ ಆರೈಕೆ, ರೋಟರಿ ಟ್ರಸ್ಟ್ ಅಧ್ಯಕ್ಷರಿಂದ ಎರಡು ಪ್ರಮುಖ ಟಿಪ್ಸ್, ಏನೇನದು?
all about Life Insurance policies







