ಲಿಂಗನಮಕ್ಕಿ ಡ್ಯಾಮ್‌ ಎಲ್ಲ ಗೇಟ್‌ ಓಪನ್‌, ಬದಲಾಯ್ತು ಜೋಗದ ಲುಕ್‌, ಎಷ್ಟು ನೀರು ಹೊರ ಬಿಡಲಾಗ್ತಿದೆ?

ಸಾಗರ: ಲಿಂಗನಮಕ್ಕಿ ಜಲಾಶಯದ (Linganamakki Dam) ಎಲ್ಲ ಗೇಟುಗಳನ್ನು ಪುನಃ ಮೇಲೆತ್ತಲಾಗಿದೆ. ಇದರಿಂದ ಶರಾವತಿ ನದಿಯಲ್ಲಿ ಪುನಃ ನೀರಿನ ಹರಿವು ಹೆಚ್ಚಳವಾಗಿದೆ. ಜೋಗ ಜಲಪಾತವು (Jog Falls) ಮೈ ದುಂಬಿ ಹರಿಯುತ್ತಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಇವತ್ತು ಒಳ, ಹೊರ ಹರಿವು ಎಷ್ಟಿದೆ?

ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ನಿರಂತರ ಮಳೆಯಾಗುತ್ತಿದೆ. ಅದ್ದರಿಂದ ಒಳ ಹರಿವು ಹೆಚ್ಚಳವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು 47,232 ಕ್ಯೂಸೆಕ್‌ ಒಳ ಹರಿವು ಇದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಎಲ್ಲ ರೇಡಿಯಲ್‌ ಗೇಟುಗಳನ್ನು ಮೇಲೆತ್ತಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಒಟ್ಟು 32,138 ಕ್ಯೂಸೆಕ್‌ ಹೊರ ಹರಿವು ಇದೆ.

Linganamakki-dam-radial-gates-opened
ಲಿಂಗನಮಕ್ಕಿ ಜಲಾಶಯದ 11 ಗೇಟುಗಳು ಓಪನ್.‌

ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 0.40 ಅಡಿ ಏರಿಕೆಯಾಗಿದೆ. 1819 ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 1817.70 ಅಡಿಯಷ್ಟಿದೆ.

Nanjappa Hospital Advertisement

ಜಲಪಾತದಲ್ಲಿ ಹೆಚ್ಚಿದ ನೀರು

ಲಿಂಗನಮಕ್ಕಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿರುವುದರಿಂದ ಜೋಗದ ಎಲ್ಲ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಸದ್ಯಕ್ಕೆ ಜೋಗ ಜಲಪಾತದ ಚಹರೆಯೆ ಬದಲಾಗಿದೆ.

jog falls
ಜೋಗ ಜಲಪಾತದಲ್ಲಿ ಭಾರಿ ಪ್ರಮಾಣದ ನೀರು. ಆಗಸ್ಟ್‌ 27ರ ಸಂಜೆಯ ದೃಶ್ಯ. | ಫೋಟೊ ಕೃಪೆ: ಗೈಡ್‌ ನಾಗರಾಜ್‌

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಹವಾಮಾನ ವರದಿ, ಇವತ್ತೂ ಅಲರ್ಟ್‌ ಪ್ರಕಟ, ತಗ್ಗಿದ ತಾಪಮಾನ

ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹಾಗಾಗಿ ಜಲಾಶಯದ ಒಳ ಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

heavy water flow in Jog Falls as all the gates opened at Linganamakki Dam.
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment