ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳ ಹರಿವು, ತುಂಗಾ, ಭದ್ರಾಗೆ ಎಷ್ಟು ನೀರು ಹರಿದು ಬರ್ತಿದೆ? ಇಲ್ಲಿದೆ ಡಿಟೇಲ್ಸ್‌

ಡ್ಯಾಂ ಮಾಹಿತಿ: ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಒಳ ಮತ್ತು ಹೊರ ಹರಿವು ಹೆಚ್ಚಳವಾಗಿದೆ. (Dam Level)

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಒಳ ಹರಿವು?

ಲಿಂಗನಮಕ್ಕಿ ಜಲಾಶಯ: ಒಳ ಹರಿವು ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಇವತ್ತು 38,931 ಕ್ಯೂಸೆಕ್‌ ಒಳ ಹರಿವು ಇದೆ. ಒಟ್ಟು 42,642 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ ರೇಡಿಯಲ್‌ ಗೇಟುಗಳ ಮೂಲಕ 36,447 ಕ್ಯೂಸೆಕ್‌ ನೀರನ್ನು ಹೊರಗೆ ಹರಿಸಲಾಗುತ್ತಿದೆ.

ತುಂಗಾ ಜಲಾಶಯ: ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಇವತ್ತು 26,278 ಕ್ಯೂಸೆಕ್‌ ಒಳ ಹರಿವು ಇದೆ. ಒಟ್ಟು 26,278 ಕ್ಯೂಸೆಕ್‌ ಹೊರ ಹರಿವು ಇದೆ. ಮೇಲ್ದಂಡೆಗೆ 1116 ಕ್ಯೂಸೆಕ್‌, ಎಡದಂಡೆಗೆ 169 ಕ್ಯೂಸೆಕ್‌, ಗೇಟ್‌ ಮೂಲಕ ಹೊಳೆಗೆ 24958 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ.

Nanjappa Hospital Advertisement

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಅಲರ್ಟ್‌ ಪ್ರಕಟ, ಕೊನೆ ದಿನವು ಅಬ್ಬರಿಸುತ್ತಾ ಮಘಾ ಮಳೆ? ಇಲ್ಲಿದೆ ಡಿಟೇಲ್ಸ್‌

ಭದ್ರಾ ಜಲಾಶಯ: ಇವತ್ತು 12700 ಕ್ಯೂಸೆಕ್‌ ಒಳ ಹರಿವು ಇದೆ. ಹಾಗಾಗಿ 10281 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ ಬಲದಂಡೆಗೆ 2650 ಕ್ಯೂಸೆಕ್‌, ಎಡದಂಡೆಗೆ 150 ಕ್ಯೂಸೆಕ್‌, ಮೇಲ್ದಂಡೆಗೆ 700 ಕ್ಯೂಸೆಕ್‌, ಕ್ರಸ್ಟ್‌ ಗೇಟುಗಳ ಮೂಲಕ 4065 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ.

linganamakki, tunga and Bhadra dam level

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment