ಶಿವಮೊಗ್ಗ ಸಿಟಿ, ಆಯನೂರು, ಹಾರನಹಳ್ಳಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ, ಯಾವ್ಯಾವ ದಿನ ಎಲ್ಲೆಲ್ಲಿ ಡ್ರೈ ಡೇ?

ಶಿವಮೊಗ್ಗ: ಜಿಲ್ಲೆಯ ಪ್ರಮುಖ ಮತ್ತು ಅತಿ ಸೂಕ್ಷ್ಮ ಗಣಪತಿಗಳ ವಿಸರ್ಜನೆ ಸಂದರ್ಭ ಆಯಾ ವ್ಯಾಪ್ತಿಯಲ್ಲಿ ಮದ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಾಟ ನಿಷೇಧಿಸಲಾಗಿದೆ. ಆಯಾ ವ್ಯಾಪ್ತಿಯಲ್ಲಿ ಡ್ರೈ ಡೇ (Dry Day) ಘೋಷಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಎಲ್ಲೆಲ್ಲಿ ಯಾವಾಗ ಡ್ರೈ ಡೇ?

ಶಿವಮೊಗ್ಗ ಸಿಟಿ

» ಹಿಂದೂ ಮಹಾಸಭಾ ಗಣಪತಿ – ಸೆ.6ರಂದು ಮೆರವಣಿಗೆ – ಸೆ.5ರ ಸಂಜೆ 6 ಗಂಟೆಯಿಂದ ಸೆ.7ರ ಬೆಳಗ್ಗೆ 6 ಗಂಟೆವರೆಗೆ ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಾಟ ನಿಷೇಧ

» ಓಂ ಗಣಪತಿ – ಸೆ.11ರಂದು ವಿಸರ್ಜನೆ – ಸೆ.10ರ ಸಂಜೆ 6 ಗಂಟೆಯಿಂದ ಸೆ.12ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ಮಹಾನಗರ ಪಾಲಿಕೆ ಅಧಿಕಾರಿ ಬಲೆಗೆ

» ಟ್ಯಾಂಕ್‌ ಮೊಹಲ್ಲಾದ ಶ್ರೀ ಮಾರಿಕಾಂಬ ಸೇವಾ ಸಮಿತಿ – ಸೆ.25ರಂದು ವಿಸರ್ಜನೆ – ಸೆ.24ರ ಸಂಜೆ 6 ಗಂಟೆಯಿಂದ ಸೆ.26ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

Alcohol-sale-ban-in-Shimoga
Gemini_Generated_Image

» ಟ್ಯಾಂಕ್‌ ಮೊಹಲ್ಲಾದ ಕೇಸರಿ ಪಡೆ – ಸೆ.30ರಂದು ವಿಸರ್ಜನೆ – ಸೆ.29ರ ಸಂಜೆ 6 ಗಂಟೆಯಿಂದ ಸೆ.31ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

ಇದನ್ನೂ ಓದಿ » ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳ ಹರಿವು, ತುಂಗಾ, ಭದ್ರಾಗೆ ಎಷ್ಟು ನೀರು ಹರಿದು ಬರ್ತಿದೆ? ಇಲ್ಲಿದೆ ಡಿಟೇಲ್ಸ್‌

» ರಾಗಿಗುಡ್ಡದ ಒಟ್ಟು 16 ಗಣಪತಿ – ಸೆ.31ರಂದು ವಿಸರ್ಜನೆ – ಸೆ.31ರ ಸಂಜೆ 6 ಗಂಟೆಯಿಂದ ಅ.1ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ರಾಗಿಗುಡ್ಡ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

ಶಿವಮೊಗ್ಗ ತಾಲೂಕು

» ಆಯನೂರಿನ ಕೋಹಳ್ಳಿಯ ಹಿಂದೂ ಮಹಾಸಭಾ ಗಣಪತಿ – ಸೆ.6ರಂದು ವಿಸರ್ಜನೆ – ಸೆ.5ರ ರಾತ್ರಿ 11 ಗಂಟೆಯಿಂದ ಸೆ.7ರ ಬೆಳಗ್ಗೆ 6 ಗಂಟೆವರೆಗೆ – ಆಯನೂರು ಮತ್ತು ಕುಂಸಿಯ 4 ಬಾರ್‌ಗಳಲ್ಲಿ ಮದ್ಯ ಮಾರಾಟ ನಿಷೇಧ.

» ಹಾರನಹಳ್ಳಿ ಹಿಂದೂ ಮಹಾಸಭಾ ಗಣಪತಿ – ಸೆ.8ರಂದು ವಿಸರ್ಜನೆ – ಸೆ.7ರ ರಾತ್ರಿ 11 ಗಂಟೆಯಿಂದ ಸೆ.9ರ ಬೆಳಗ್ಗೆ 6 ಗಂಟೆವರೆಗೆ ನಿಷೇಧ – ಹಾರನಹಳ್ಳಿ ವ್ಯಾಪ್ತಿಯ 2 ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ನಿಷೇಧ.

Dry Day in shivamogga city and taluk

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : August 29, 2025 at 7:54 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಆಗಷ್ಟ್ 29, 2025

Leave a Comment