ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಭದ್ರಾವತಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರು ಭದ್ರಾ ನದಿಗೆ (Bhadra River) ಭಾನುವಾರ ಬಾಗಿನ ಅರ್ಪಿಸಿದರು.
ಬಸವರಾಜಪ್ಪ ಏನೆಲ್ಲ ಹೇಳಿದರು? 3 ಪಾಯಿಂಟ್
ಉತ್ತಮ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಈ ವರ್ಷವೂ ಬೇಸಿಗೆ ಬೆಳೆ ಬೆಳೆಯಲು ರೈತರು ಆತಂಕಪಡುವ ಅಗತ್ಯವಿಲ್ಲ.
ನೀರನ್ನು ಸದ್ಬಳಕೆ ಮಾಡಿಕೊಂಡು ಅಚ್ಚುಕಟ್ಟು ಭಾಗದ ಕೊನೆ ಭಾಗದ ರೈತರಿಗೂ ನೆರವಾಗಬೇಕು. ಎರಡೂವರೆ ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಅಡಿಕೆ, ತೆಂಗು, ಭತ್ತ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಭದ್ರಾ ಅಚ್ಚಕಟ್ಟು ವ್ಯಾಪ್ತಿಯ ನಾಲಾ, ಗೇಟ್ಗಳ ದುರಸ್ತಿ ಮಾಡದೇ ನೀರು ವ್ಯರ್ಥವಾಗುತ್ತಿದೆ. ಈ ನೀರನ್ನು ತಡೆಯಲು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಏನಿದೆ ಅಲರ್ಟ್? ಇಲ್ಲಿದೆ ರಿಪೋರ್ಟ್
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಹಿಟ್ಟೂರು ರಾಜು, ಪ್ರಮುಖರಾದ ಟಿ.ಎಂ. ಚಂದ್ರಪ್ಪ, ಮುನಿಯಪ್ಪ, ಚಿಕ್ಕಬ್ಬಿಗೆರೆ ನಾಗರಾಜ್, ಭಾಗ್ಯಾ ರಾಘವೇಂದ್ರ, ಮರುಳಸಿದ್ದಯ್ಯ, ಮಲ್ಲಿಕಾರ್ಜುನ, ಕುಮಾರಯ್ಯ, ಪುಷ್ಪಾ, ಕೆ. ರಾಘವೇಂದ್ರ, ಹುಲಿಮಟ್ಟಿ ಜಯಣ್ಣ, ಪಿ.ಶೇಖರಪ್ಪ, ಎಂ.ಡಿ. ನಾಗರಾಜ್, ಜಿ.ಎನ್. ಪಂಚಾಕ್ಷರಿ, ಉಪಾಧ್ಯಕ್ಷ ಬಿ.ಆರ್.ಪಿ ಹಾಲಪ್ಪ, ರಾಜಶೇಖರ್, ಅಕ್ಕಿ ರಾಜು, ಮೂರ್ತಿ ಭಾಗವಹಿಸಿದ್ದರು.
Bagina to Bhadra River
LATEST NEWS
- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

About The Editor
ನಿತಿನ್ ಆರ್.ಕೈದೊಟ್ಲು





