ಶಿವಮೊಗ್ಗದಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ, ದಾಖಲಾಯ್ತು FIR, ಯಾರ ವಿರುದ್ಧ? ಈತನಕ ಏನಾಯ್ತು?

ಓದುಗರ ಗಮನಕ್ಕೆ: ಅಪ್ರಾಪ್ತರ (Student) ಪ್ರಕರಣ ಆಗಿರುವುದರಿಂದ ಅವರ ಹೆಸರು, ವಿಳಾಸ ಮತ್ತು ಗುರುತು ಬಹಿರಂಗ ಆಗುವಂತಹ ಯಾವುದೇ ಮಾಹಿತಿ ಪ್ರಕಟಿಸುವಂತಿಲ್ಲ. ಆದ್ದರಿಂದ ಈ ಸುದ್ದಿಯಲ್ಲಿ ಅಂತಹ ಯಾವುದೇ ಅಂಶಗಳಿಲ್ಲ.➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: 9ನೇ ತರಗತಿ ವಿದ್ಯಾರ್ಥಿನಿ ಮಗುವಿನ ಜನ್ಮ ನೀಡಿದ ಪ್ರಕರಣ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವಿದ್ಯಾರ್ಥಿನಿಯ ಸಹೋದರನ ವಿರುದ್ಧವೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಪ್ರಕರಣದ ಕುರಿತು ಇಲ್ಲಿದೆ ಪ್ರಮುಖಾಂಶ

» ಮನೆಯಲ್ಲೇ ರಾತ್ರಿ ಮಗುವಿಗೆ ಜನ್ಮ

ಮೂರು ದಿನದ ಹಿಂದೆ ರಾತ್ರಿ 14 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಕೂಡಲೆ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮಗು 1.8 ಕೆ.ಜಿ ತೂಕವಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದಾರೆ.

» ಆಸ್ಪತ್ರೆಗೆ ಪೊಲೀಸರು, ಅಧಿಕಾರಿಗಳು

ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ವಿಚಾರಣೆ ನಡೆಸಿದರು.

Mc-gann-hospital-mother-and-child-ward

» ಬಡ ಕುಟುಂಬಕ್ಕೆ ಆರೋಗ್ಯ ಸಮಸ್ಯೆ

ಬಾಲಕಿಯದ್ದು ಬಡ ಕುಟುಂಬ. ಸಣ್ಣದೊಂದು ಮನೆಯಲ್ಲಿ ಪೋಷಕರು ಜೊತೆಗೆ ವಾಸವಾಗಿದ್ದಾಳೆ. ಆಕೆಯ ಪೋಷಕರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಮಕ್ಕಳಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ತಿಳಿದು ಬಂದಿದೆ.

Prashanth-Loan-Advertisement.

» ಗೊಂದಲದ ಹೇಳಿಕೆ ನೀಡಿದ್ದ ಬಾಲಕಿ

ಮಗುವಿಗೆ ಜನ್ಮ ನೀಡಿದ ನಂತರ ಪೊಲೀಸರು, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಅವರು ಬಾಲಕಿಯ ವಿಚಾರಣೆ ನಡೆಸಿದರು. ಈ ಸಂದರ್ಭ ಆಕೆ ಗೊಂದಲದ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆ ಆಪ್ತ ಸಮಾಲೋಚನೆ ನಡೆಸಲಾಯಿತು. ನಂತರ ಆಕೆ ತನ್ನ ಸಹೋದರನಿಂದಲೇ ಗರ್ಭವತಿಯಾಗಿದ್ದಾಗಿ ತಿಳಿಸಿದ್ದಾಳೆ. ಈ ಹಿನ್ನೆಲೆ 17 ವರ್ಷದ ಆಕೆಯ ಸಹೋದರನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗರಂ, ಏನಂದ್ರು ಸದಸ್ಯ ಶಶಿಧರ ಕೋಸಂಬೆ?

» ಮುಂದಿನ ಪ್ರಕ್ರಿಯೆಗಳೇನು?

ಬಾಲಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಮಕ್ಕಳ ಕಲ್ಯಾಣ ಸಮಿತಿ ಆಕೆಯ ಆರೈಕೆ ಮಾಡಲಿದೆ. 18 ವರ್ಷ ಆಗುವವರೆಗೆ ಆಕೆ ಸಮಿತಿಯ ರಕ್ಷಣೆಯಲ್ಲಿ ಇರಬೇಕಾಗುತ್ತದೆ. ಇನ್ನು, ಬಯಸಿದರೆ ಮಗುವನ್ನು ಬಾಲಕಿಯ ಸುಪರ್ದಿಗೆ ವಹಿಸಲಾಗುತ್ತದೆ. ಇಲ್ಲವಾದಲ್ಲಿ ಕಾನೂನು ಪ್ರಕಾರ ದತ್ತು ನೀಡಲು ಅವಕಾಶವಿದೆ. ಮತ್ತೊಂದೆಡೆ ಆಕೆಯ ಸಹೋದರನನ್ನು ಬಾಲಮಂದಿರಕ್ಕೆ ರವಾನಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9th standard Student gives birth to a baby boy in Shivamogga district

Leave a Comment