ಶಿವಮೊಗ್ಗದ ರೈಲ್ವೆ ಪ್ರಯಾಣಿಕರೆ ಗಮನಿಸಿ, ಕೆಲವು ರೈಲು ರದ್ದಾಗಿವೆ, ಕೆಲವು ತಡವಾಗಿ ಚಲಿಸಲಿವೆ, ಇಲ್ಲಿದೆ ಲಿಸ್ಟ್‌

ಶಿವಮೊಗ್ಗ: ಬೀರೂರು – ಶಿವಪುರ, ಬೀರೂರು – ತಾಳಗುಪ್ಪ ಹಾಗೂ ಬೀರೂರು-ನಾಗವಂಗಲ ಸ್ಟೇಷನ್‌ಗಳ ಮಧ್ಯೆ ಲೈನ್ ಮತ್ತು ವಿದ್ಯುತ್ ತಡೆ ಹಾಗೂ ಎನ್‌.ಎಚ್.-206 ರಲ್ಲಿ ಎನ್‌ಎಚ್‌ಎಐ ರಸ್ತೆ ಮೇಲ್ಸೇತುವೆಗೆ (ಆರ್.ಓ.ಬಿ) ಬೋಸ್ಟ್ರಿಂಗ್ ಗರ್ಡರ್ ಅಳವಡಿಸುವ ಕಾರ್ಯ ನಡೆಸಲಾಗುತ್ತಿದೆ. (Trains)

ಕಾಮಗಾರಿಯ ಹಿನ್ನಲೆ ಕೆಲವು ರೈಲುಗಳು ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳನ್ನು ಮಾರ್ಗ ಮಧ್ಯೆ ನಿಯಂತ್ರಣ ಮಾಡಲಾಗುತ್ತದೆ ಹಾಗೂ ಮರುನಿಗದಿಗೊಳ್ಳುತ್ತವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರದ್ದುಪಡಿಸಿದ ರೈಲುಗಳು

  • ರೈಲು ಸಂಖ್ಯೆ. 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ – ಸೆಪ್ಟಂಬರ್‌ 1, 8, 14 ಮತ್ತು 15 ರಂದು ರದ್ದು.
  • ರೈಲು ಸಂಖ್ಯೆ. 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ ಸೆಪ್ಟೆಂಬರ್‌ 1, 2, 9, 15 ಮತ್ತು 16 ರಂದು ರದ್ದು.
  • ರೈಲು ಸಂಖ್ಯೆ. 16214 ಎಸ್ಎಸ್ಎಸ್ ಹಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ 8 ಸೆಪ್ಟೆಂಬರ್ 2025 ರಂದು ರದ್ದು.
  • ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ರದ್ದು.
  • ರೈಲು ಸಂಖ್ಯೆ. 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 8 ಸೆಪ್ಟೆಂಬರ್ 2025 ರಂದು ರದ್ದು.
  • ರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ರದ್ದು.

ಮರುನಿಗದಿಪಡಿಸಿದ ರೈಲುಗಳು

  • ರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಶಿವಮೊಗ್ಗ ಟೌನ್ ನಿಂದ ಸೆಪ್ಟೆಂಬರ್‌ 1, 2, 15 ಮತ್ತು 16 ಸೆಪ್ಟೆಂಬರ್ 2025 ರಂದು 75 ನಿಮಿಷ ತಡವಾಗಿ ಹೊರಡಲಿದೆ.
  • ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ ಅರಸೀಕೆರೆಯಿಂದ 1, 2, 15 ಮತ್ತು 16 ಸೆಪ್ಟೆಂಬರ್ 2025 ರಂದು 45 ನಿಮಿಷ ತಡವಾಗಿ ಹೊರಡಲಿದೆ.

Prayanikare-Gamanisi-Indian-Railway-News

ನಿಯಂತ್ರಿತ ರೈಲುಗಳು

  • ರೈಲು ಸಂಖ್ಯೆ. 20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 75 ನಿಮಿಷ ನಿಯಂತ್ರಿಸಲಾಗುವುದು.
  • ರೈಲು ಸಂಖ್ಯೆ. 56272 ಚಿಕ್ಕಮಗಳೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 30 ನಿಮಿಷ ನಿಯಂತ್ರಿಸಲಾಗುವುದು.

ಇದನ್ನೂ ಓದಿ » ತೀರ್ಥಹಳ್ಳಿಯ ವ್ಯಕ್ತಿಗೆ 20 ವರ್ಷ ಜೈಲು, ₹75,000 ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಏನಿದು ಪ್ರಕರಣ?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : September 1, 2025 at 8:20 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 1, 2025

Leave a Comment