ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ರಿಪೇರಿ ಮಾಡದೆ ಸೇವಾ ನ್ಯೂನತೆ ಎಸಗಿದ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಓಲಾ ಸಂಸ್ಥೆಗೆ ಶಿವಮೊಗ್ಗ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ದ್ವಿಚಕ್ರ ವಾಹನ ಮಾಲೀಕನಿಗೆ ಪರಿಹಾರ (compensation) ನೀಡುವಂತೆ ಆದೇಶಿಸಿದೆ.
ಏನಿದು ಪ್ರಕರಣ?
ಶಿವಮೊಗ್ಗದ ವ್ಯಕ್ತಿಯೊಬ್ಬರು 2022ರಲ್ಲಿ ₹1.51 ಲಕ್ಷ ಪಾವತಿಸಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. ಬ್ಯಾಟರಿಗೆ ಎಂಟು ವರ್ಷ, ಇತರೆ ಬಿಡಿ ಭಾಗಕ್ಕೆ ಮೂರು ವರ್ಷದ ಗ್ಯಾರಂಟಿ ಇತ್ತು. ವಾಹನ ಖರೀದಿಸಿದ ಒಂದೇ ತಿಂಗಳಿಗೆ ಸ್ಕೂಟರ್ ಸ್ಟಾರ್ಟ್ ಆಗಿರಲಿಲ್ಲ. ಓಲಾ ಸಂಸ್ಥೆ ಆಗ ಸ್ಕೂಟರ್ ಇಪೇರಿ ಮಾಡಿಕೊಟ್ಟಿತ್ತು.
2025ರ ಜನವರಿ ತಿಂಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪುನಃ ಸ್ಟಾರ್ಟ್ ಆಗದೆ ಸಮಸ್ಯೆಯಾಗಿತ್ತು. ಆಗ ₹90,000 ಪಾವತಿಸಿದರೆ ಸ್ಕೂಟರ್ ರಿಪೇರಿ ಮಾಡುವುದಾಗಿ ಸಂಸ್ಥೆಯವರು ತಿಳಿಸಿದ್ದರು. ವಾರಂಟಿ ಅವಧಿ ಇದ್ದರು ರಿಪೇರಿಗೆ ಸಂಸ್ಥೆಯ ಪ್ರತಿನಿಧಿಗಳು ನಿರಾಕರಿಸಿದ್ದರು. ಅಲ್ಲದೆ ಸ್ಕೂಟರನ್ನು ತಮ್ಮ ಬಳಿಯೆ ಇರಿಸಿಕೊಂಡಿದ್ದರು. ಈ ಹಿನ್ನೆಲೆ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಸ್ಥೆಯ ಪ್ರತಿನಿಧಿಗಳಿಗೆ ಆಯೋಗದ ಬಿಸಿ
ದೂರು ದಾಖಲಿಸಿಕೊಂಡು ಓಲಾ ಸಂಸ್ಥೆಯ ಪ್ರತಿನಿಧಿಗಳಿಗೆ ನೊಟೀಸ್ ನೀಡಲಾಗಿತ್ತು. ಆದರೆ ಯಾರೊಬ್ಬರು ಪ್ರತಿಕ್ರಿಯೆ ನೀಡದೆ, ವಿಚಾರಣೆಗು ಹಾಜರಾಗಿರಲಿಲ್ಲ.

ವಾರಂಟಿ ಅವಧಿಯಲ್ಲಿ ರಿಪೇರಿ ಮಾಡಿಕೊಡದೆ ಸೇವಾ ನ್ಯೂನತೆ ಎಸಗಿದ್ದಾರೆ. ಆದ್ದರಿಂದ ವಾಹನದ ಮಾಲೀಕರಿಗೆ ಶೇ.10ರ ಬಡ್ಡಿದರದಲ್ಲಿ ₹67,348 ಪರಿಹಾರ ನೀಡಬೇಕು. 45 ದಿನದೊಳಗೆ ಪಾವತಿಸದೆ ಇದ್ದರೆ ಶೇ.12ರ ಬಡ್ಡಿ ದರ ಸೇರಿಸಿ ಪುರ್ತಿ ಹಣ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಮತ್ತೆ ಅಲರ್ಟ್ ಪ್ರಕಟ, ಇವತ್ತು ಯಾವ ಅಲರ್ಟ್ ಇರಲಿದೆ?
ವಾಹನದ ಮಾಲೀಕರ ಮಾನಸಿಕ ವೇದನೆ ಮತ್ತು ದೂರಿನ ಖರ್ಚುವೆಚ್ಚಕ್ಕಾಗಿ ಶೇ.10ರ ಬಡ್ಡಿ ದರ ಸೇರಿಸಿ ₹40,000 ಪರಿಹಾರ ನೀಡಬೇಕು. 45 ದಿನದೊಳಗೆ ಪಾವತಿಸದೆ ಇದ್ದರೆ ಶೇ.12ರಷ್ಟು ಬಡ್ಡಿ ದರ ಸೇರಿಸಿ ಪರಿಹಾರ ನೀಡಬೇಕು.
ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠ ಈ ಅದೇಶ ನೀಡಿದೆ.
compensation for ola bike owner
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















