ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಪರಿವರ್ತಿಸಲು ಒತ್ತಾಯ, ಇವತ್ತು ಸಮಾಲೋಚನಾ ಸಭೆ

ಸಾಗರ: ಸಾಗರ ತಾಲೂಕನ್ನು ಜಿಲ್ಲಾ (District) ಕೇಂದ್ರವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಲು ಸಾಗರ ಜಿಲ್ಲಾ ಘಟಕದ ಹೋರಾಟ ಸಮಿತಿಯು ಸೆ.5ರಂದು ಸಂಜೆ 4 ಗಂಟಗೆ ಗಾಂಧಿ ಮೈದಾನದಲ್ಲಿರುವ ನಗರಸಭೆ ಬಯಲು ರಂಗಮಂದಿರದಲ್ಲಿ ಸಮಾಲೋಚನಾ ಸಭೆ ಆಯೋಜಿಸಿದೆ.

ಸಾಗರ ತಾಲ್ಲೂಕು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದೆ. 2026ರ ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರ ಜನಗಣತಿ ಆರಂಭಿಸುತ್ತಿದೆ. ಅಷ್ಟರ ಒಳಗೆ ನೂತನ ಜಿಲ್ಲಾ ಕೇಂದ್ರಗಳ ರಚನೆ ಪ್ರಕ್ರಿಯೆ ಪೂರೈಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಲು ಈ ಸಭೆ ಕರೆಯಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಎಲ್ಲಾ ಸಂಘ ಸಂಸ್ಥೆಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ದಾರೆ.

Prashanth-Loan-Advertisement.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಶೂ ಒಳಗೆ ಬೆಚ್ಚಗೆ ಮಲಗಿತ್ತು ಹಾವು

District

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : September 5, 2025 at 3:40 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 5, 2025

Leave a Comment