ದುಮ್ಮಳ್ಳಿ ಗ್ರಾಮದ ನಿವಾಸಿ ಕವಿತಾ ಬಾಯಿ.ಟಿ (26) ಮೃತ ದುರ್ದೈವಿ. ಸಹೋದರನೊಂದಿಗೆ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ರಾಂಗ್ ರೂಟ್ ಬೈಕು, ಬಸ್ ಅಡಿ ಯುವತಿ
ಕವಿತಾ ಮತ್ತು ಆಕೆಯ ಸಹೋದರ ತೆರಳುತ್ತಿದ್ದ ಬೈಕ್ಗೆ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಕವಿತಾ ಮತ್ತು ಆಕೆಯ ಸಹೋದರ ರಸ್ತೆಗೆ ಬಿದ್ದಿದ್ದಾರೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಸಿಟಿ ಬಸ್ಸಿನ ಅಡಿಗೆ ಸಿಲುಕಿ ಕವಿತಾ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಆರೋಪಿಸಲಾಗಿದೆ.

ಕವಿತಾ ಬಾಯಿ ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೇಡಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 24 ಮತ್ತು 25ರಂದು ಕವಿತಾಳ ಮದುವೆ ನಿಶ್ಚಯವಾಗಿತ್ತು. ಸ್ನೇಹಿತರಿಗೆ ಮದುವೆ ಆಮಂತ್ರಣ ಪತ್ರ ನೀಡಿ, ಕೆಲಸಕ್ಕೆ ತೆರಳಿ ರಜೆ ಹಾಕಿ ಬರಲು ಸಹೋದರನ ಜೊತೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ದುರ್ಘಟನೆ ಸಂಭವಿಸಿದೆ.ಇನ್ನೆರಡು ವಾರದಲ್ಲಿ ಮದುವೆ ಇತ್ತು

ಮುಗಿಲು ಮುಟ್ಟಿದ ಆಕ್ರಂದನ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬದವರು ಸ್ಥಳಕ್ಕೆ ದೌಡಾಯಿಸಿದರು. ಕವಿತಾ ಮೃತದೇಹ ಕಂಡು ಆಘಾತಕ್ಕೊಳಗಾದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಸ್ನೇಹಿತರು, ಪರಿಚಿತರು, ಸಂಬಂಧಿಕರು ದೊಡ್ಡ ಸಂಖ್ಯೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ಆಗಮಿಸಿದ್ದರು.

ಘಟನೆ ಸಂಬಂಧ ಶಿವಮೊಗ್ಗದ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಜೀ ಕನ್ನಡದ ನಾವು ನಮ್ಮವರು ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ದಂಪತಿ, ಹೇಗಿದೆ ಇವರ ಪ್ರದರ್ಶನ?