ಸಹ್ಯಾದ್ರಿ ಕಾಲೇಜಿನಲ್ಲಿ ಇಂದಿನಿಂದ ಎರಡು ದಿನ ಕಾರ್ಯಾಗಾರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಸೆ. 9 ಮತ್ತು 10 ರಂದು ಬೆಳಿಗ್ಗೆ 10.30ಕ್ಕೆ ಎನ್ಎಸ್ಎಸ್ ಸ್ವಯಂ ಸೇವಕರಿಗೆ ಎರಡು ದಿನ ವಿಶ್ವವಿದ್ಯಾಲಯ ಮಟ್ಟದ ‘ನಾಯಕತ್ವ ತರಬೇತಿ ಕಾರ್ಯಾಗಾರ’ (Leadership training) ಹಮ್ಮಿಕೊಳ್ಳಲಾಗಿದೆ. 

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ.ಎಲ್. ಮಂಜುನಾಥ ಕಾರ್ಯಾಗಾರ ಉದ್ಘಾಟಿಸುವರು. ಪ್ರಾಚಾರ್ಯ ಪ್ರೊ.ಟಿ. ಅವಿನಾಶ್ ಅಧ್ಯಕ್ಷತೆ ವಹಿಸುವರು.

ರಾಜ್ಯ ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮ ನಿರ್ದೇಶಕ ಪ್ರೊ.ಜಿ.ಬಿ. ಶಿವರಾಜ ಅವರು ಆಶಯ ಭಾಷಣ ಮಾಡುವರು. ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಮರ್ಗನಳ್ಳಿ, ಕಾರ್ಯಕ್ರಮಾಧಿಕಾರಿ ಎನ್. ಕುಮಾರ್ ಸೇರಿದಂತೆ ಗಣ್ಯರು ಪಾಲ್ಗೊಳ್ಳುವರು ಎಂದು ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭ ಮರವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Nanjappa Hospital Advertisement

sahyadri-college-general-image

ಇದನ್ನೂ ಓದಿ » ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಐತಿಹಾಸಿಕ ಲಾಭ, ಸದ್ಯದಲ್ಲೆ ಶುರುವಾಗಲಿವೆ ಹೊಸ ಶಾಖೆಗಳು, ಎಲ್ಲೆಲ್ಲಿ?

Prashanth-Loan-Advertisement.

Leadership training

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment