ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೆ ಇವತ್ತು ಒಳ ಹರಿವು ಎಷ್ಟಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಜಲಾಶಯ ಸುದ್ದಿ: ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹಾಗಾಗಿ ಜಿಲ್ಲೆಯ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ. (Dam Level)

ಯಾವ್ಯಾವ ಡ್ಯಾಮ್‌ಗೆ ಎಷ್ಟಿದೆ ಒಳಹರಿವು?

ಭದ್ರಾ ಜಲಾಶಯ: ಇವತ್ತು ಡ್ಯಾಮ್‌ಗೆ 9017 ಕ್ಯೂಸೆಕ್‌ ಒಳಹರಿವು ಇದೆ. ಜಲಾಶಯದ ನೀರಿನ ಮಟ್ಟ 184.8 ಅಡಿಯಷ್ಟಿದೆ. ಒಟ್ಟು 6621 ಕ್ಯೂಸೆಕ್‌ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಈ ಪೈಕಿ ಬಲದಂಡೆಗೆ 2650 ಕ್ಯೂಸೆಕ್‌, ಎಡದಂಡೆಗೆ 150 ಕ್ಯೂಸೆಕ್‌, ಮೇಲ್ದಂಡೆಗೆ 700 ಕ್ಯೂಸೆಕ್‌, ಕ್ರಸ್ಟ್‌ ಗೇಟ್‌ ಮೂಲಕ 401 ಕ್ಯೂಸೆಕ್‌ ಹೊರ ಬಿಡಲಾಗುತ್ತಿದೆ.

ತುಂಗಾ ಜಲಾಶಯ: ಗಾಜನೂರಿನ ತುಂಗಾ ಡ್ಯಾಮ್‌ ಈಗಾಗಲೇ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಡ್ಯಾಮ್‌ಗೆ 7401 ಕ್ಯೂಸೆಕ್‌ ಒಳ ಹರಿವು ಇದ್ದು, ಅಷ್ಟೇ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಈ ಪೈಕಿ ನದಿಗೆ 5920 ಕ್ಯೂಸೆಕ್‌, ಮೇಲ್ದಂಡೆಗೆ 1154 ಕ್ಯೂಸೆಕ್‌, ಎಡದಂಡೆ ನಾಲೆಗೆ 192 ಕ್ಯೂಸೆಕ್‌, ಬಲದಂಡೆಗೆ 100 ಕ್ಯೂಸೆಕ್‌ ಹರಿಸಲಾಗುತ್ತಿದೆ.

linganamakki-dam-back-water

ಲಿಂಗನಮಕ್ಕಿ ಡ್ಯಾಮ್:‌ ಇವತ್ತು 6,290 ಕ್ಯೂಸೆಕ್‌ ಒಳ ಹರಿವು ಇದೆ. ಜಲಾಶಯ ಶೇ.97.08ರಷ್ಟು ಭರ್ತಿಯಾಗಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.05 ಅಡಿಯಷ್ಟು ಏರಿಕೆಯಾಗಿದೆ. ಸದ್ಯ ನೀರಿನ ಮಟ್ಟ 1817.70 ಅಡಿಯಷ್ಟಿದೆ. ಒಟ್ಟು 8587 ಕ್ಯೂಸಕ್‌ ಹೊರ ಹರಿವು ಇದೆ.

ಇದನ್ನೂ ಓದಿ » ಭಾರತೀಯ ಸೇನೆ, ಯುನಿಫಾರ್ಮ್‌ ಸೇವೆಗೆ ಸೇರ ಬಯಸುವವರಿಗೆ ಉಚಿತ ತರಬೇತಿ, ಅರ್ಜಿ ಆಹ್ವಾನ

Dam Level 

-Linganamakki-Dam-General-Image

Leave a Comment