ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌, ಈಗಲೇ ನೋಂದಣಿಗೆ ಸೂಚನೆ

ಶಿವಮೊಗ್ಗ: ಯುವನಿಧಿ (Yuva Nidhi) ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಶಿವಮೊಗ್ಗ ಜಿಲ್ಲೆಯ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಯೋಜನೆಯಡಿ ಸರ್ಕಾರ ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ), ಜಿಟಿಟಿಸಿ, ಸಿಇಡಿಒಕೆ, ಕೆಎಸ್‌ ಡಿಸಿಯಿಂದ ಉಚಿತ ಕೌಶಲ್ಯಾಧಾರಿತ ತರಬೇತಿ ನೀಡುತ್ತಿದೆ. ಯುವನಿಧಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ರಾಜ್ಯ ಕೌಶಲಾಭಿವೃದ್ಧಿ ನಿಗಮದ ವೆಬ್ ಸೈಟ್ https:// www.kaushalkar.com/app/registration_verify ಬಳಸಿ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಕೌಶಲ್ಕಾರ್ ಪೋರ್ಟಲ್‌ನಲ್ಲಿ ಯುವನಿಧಿ ಫಲಾನುಭವಿಗಳು ತರಬೇತಿ ಪಡೆದರೆ ನಿರುದ್ಯೋಗ ಭತ್ಯೆ ತಡೆಹಿಡಿಯಲಾಗುತ್ತದೆ ಎಂದು ಭಾವಿಸಿ ಕೌಶಲ್ಕಾರ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಹಿಂಜರಿಯುತ್ತಿರುವುದಾಗಿ ತಿಳಿದುಬಂದಿದೆ.

ತರಬೇತಿ ಪಡೆದರೂ ಸರ್ಕಾರ ನಿಗದಿಪಡಿಸಿರುವ ಅವಧಿಯವರೆಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಆದ್ದರಿಂದ ಯುವನಿಧಿ ಫಲಾನುಭವಿಗಳು ನೋಂದಣಿ ಮಾಡಿಕೊಂಡು ತಮ್ಮ ಇಚ್ಚೆಯ ತರಬೇತಿ ಪಡೆಯುವಂತೆ ಜಿಲ್ಲಾ ಕೌಶಲಾಭಿವೃದ್ಧಿ ನಿಗಮ ಅಧಿ ಕಾರಿಗಳ ಪ್ರಕಟಣೆ ತಿಳಿಸಿದೆ.

Nanjappa Hospital Advertisement

JNNCE-Admission-Advt-scaled

ಇದನ್ನೂ ಓದಿ » ಹೊಸನಗರದಲ್ಲಿ ಉಕ್ಕಡ ಮಗುಚಿ ಯುವಕ ನಾಪತ್ತೆ, ಸರ್ಕಾರದ ವಿರುದ್ಧ ಸ್ಥಳೀಯರು ಗರಂ, ಹೇಗಾಯ್ತು ಘಟನೆ?

training in Yuva Nidhi scheme

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment