ಶಿವಮೊಗ್ಗ: ನಗರದಲ್ಲಿ ಈದ್ ಮಿಲಾದ್ (Eid Milad) ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಮೆರವಣಿಗೆ ಹೇಗಿತ್ತು? ಏನೆಲ್ಲ ಇತ್ತು? ಇಲ್ಲಿದೆ ಪಾಯಿಂಟ್ಸ್ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಮೆರವಣಿಗೆ ಆರಂಭವಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಮೆರವಣಿಗೆ ಮುಕ್ತಾಯವಾಯಿತು.
ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ವೇಷದಲ್ಲಿ ಮಕ್ಕಳು ಭಾಗವಹಿಸಿದ್ದು ಗಮನ ಸೆಳೆಯಿತು. ಟಿಪ್ಪು ಸುಲ್ತಾನ್ ಚಿತ್ರವಿರುವ ಬೃಹತ್ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
ವಿವಿಧೆಡೆಯ ಸುಮಾರು 100ಕ್ಕೂ ಹೆಚ್ಚು ಡಿ.ಜೆ.ಗಳು ಮೆರವಣಿಗೆಯಲ್ಲಿ ಇದ್ದವು. ಪ್ರತಿ ಡಿಜೆ ಹಿಂಬದಿಯು ಯುವಕರ ಗುಂಪು ಕುಣಿದು ಕುಪ್ಪಳಿಸುತ್ತಿದ್ದರು.
ಇಲ್ಲಿದೆ ಮೆರವಣಿಗೆಯ ಫೋಟೊಗಳು ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡರು. ಶಿವಮೊಗ್ಗದಲ್ಲಿ ಟಪ್ಪು ಸುಲ್ತಾನ್ ವೇಷಧಾರಿ ಮಕ್ಕಳು. ಆಟೋ ಮೇಲೆ ಸಿಂಹಾಸನದಲ್ಲಿ ಕುಳಿತ ಟಿಪ್ಪು ಸುಲ್ತಾನ್ ವೇಷಧಾರಿ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ. ಮೆರವಣಿಗೆಯಲ್ಲಿ ಮೆಕ್ಕಾ ಮದೀನ ಮತ್ತು ಮಸೀದಿಯ ಮಾದರಿ. ಮೆರವಣಿಗೆಯಲ್ಲಿ ಧ್ವಜ ತಿರುಗಿಸಿ ಸಂಭ್ರಮಿಸಿದ ಯುವಕರು. ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ. ರಸ್ತೆ ಬದಿ ನಿಂತುಕೊಂಡು ಈದ್ ಮಿಲಾದ್ ಮೆರವಣಿಗೆ ವೀಕ್ಷಿಸಿದ ಜನ. ಈದ್ ಮಿಲಾದ್ ಮೆರವಣಿಗೆಯಲ್ಲಿ ರಾರಾಜಿಸಿದ ಟಿಪ್ಪು ಸುಲ್ತಾನ್ ಫೋಟೊಗಳು. ಕಂಬವೇರಿ ಹಸಿರು ಧ್ವಜ ತಿರುಗಿಸಿದ ಯುವಕರು. ಮೆರವಣಿಗೆಯಲ್ಲಿ ಯುವತಿಯ ಡಾನ್ಸ್. ಮೆರವಣಿಗೆಯಲ್ಲಿ ಕುದುರೆ ಏರಿ ಬಂದ ಮೊಹಮದ್ ಆಸೀಫ್ ಮತ್ತು ಮುಜೀಬ್. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದನ್ನೂ ಓದಿ » ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ದಿನ? ಎಲ್ಲೆಲ್ಲಿ ಇರುತ್ತೆ ಸ್ಟಾಪ್?
Eid Milad procession in Shimoga city
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
EDITOR / AUTHOR PROFILE
Published : September 15, 2025 at 8:38 PM IST