ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು (Birthday) ಶಿವಮೊಗ್ಗದ ಯುವ ಕಾಂಗ್ರೆಸ್ ಕಾರ್ಯಕರ್ತರು ನಿರುದ್ಯೋಗ ದಿನಾಚರಣೆ ಮಾಡಿದರು. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪದವೀಧರರು ಬೋಂಡ ಬಜ್ಜಿ, ಟೀ, ಪೇಪರ್, ತರಕಾರಿ ಮಾರಾಟ ಮಾಡಿ, ಶೂ ಪಾಲಿಷ್ ಮಾಡಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ತರಕಾರಿ ಮಾರಾಟ ಮಾಡಿದರು. ಟ್ರಾಫಿಕ್‌ನಲ್ಲಿ ನಿಂತಿದ್ದ ವಾಹನ ಸವಾರರಿಗೆ ಟೀ, ಪೇಪರ್, ಬೋಂಡ ಮಾರಾಟ ಮಾಡಿದರು. ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.
ಯಾರೆಲ್ಲ ಏನೆಲ್ಲ ಹೇಳಿದರು?
ಮತಗಳ್ಳತನ ಮಾಡಿ ಗದ್ದುಗೆ ಹಿಡಿದ ಪ್ರಧಾನಿ ನರೇಂದ್ರ ಮೋದಿ ಯುವಕರು, ರೈತರಿಗೆ ಪೂರಕವಾದ ಯೋಜನೆ ರೂಪಿಸದೆ ನಿರುದ್ಯೋಗ ಪ್ರಮಾಣ ಹೆಚ್ಚಿಸಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟದಿಂದ ಕೆಳಗಿಳಿಯಬೇಕು.
- ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
![]()
75 ವರ್ಷ ಆದ ಮೇಲೆ ಅಧಿಕಾರ ಬಿಡಬೇಕು ಎಂಬುದು ಆರ್‌ಎಸ್ಎಸ್ ನಿಯಮ. ಇವತ್ತು ಮೋದಿ ಅವರಿಗೆ 75 ವರ್ಷ ಆಗಿರುವುದರಿಂದ ಇವತ್ತು ಅಧಿಕಾರ ಬಿಡಬೇಕು. ಇದು ನಮ್ಮೆಲ್ಲರಿಗು ಖುಷಿಯ ವಿಚಾರ.
- ಹೆಚ್.ಸಿ.ಯೋಗೇಶ್, ಕಾಂಗ್ರೆಸ್ ಮುಖಂಡ
![]()
ಪ್ರಮುಖರಾದ ಮಧುಸೂದನ್, ಚೇತನ್ ಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಜೆ.ಶೆಟ್ಟಿ, ಉತ್ತರ ಬ್ಲಾಕ್ ಅಧ್ಯಕ್ಷ ಗಿರೀಶ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಸಕ್ಲೈನ್ ಸೇರಿದಂತೆ ಹಲವರು ಇದ್ದರು.






ಇದನ್ನೂ ಓದಿ » ಸಿಎಂ ಸಿದ್ದರಾಮಯ್ಯ ಬಗ್ಗೆ ಫೇಸ್‌ಬುಕ್‌ನಲ್ಲಿ ಕಾಮೆಂಟ್, ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್
