ತೀರ್ಥಹಳ್ಳಿಯಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ, ಎಲ್ಲೆಲ್ಲಿ ಸಂಚರಿಸಿದವು?

ತೀರ್ಥಹಳ್ಳಿ: ಕುಡುಮಲ್ಲಿಗೆ ಸಮೀಪದ ಕುನ್ನಳ್ಳಿ ಗ್ರಾಮದಲ್ಲಿ ವಿವಿಧ ರೈತರಿಗೆ ಸೇರಿದ ಗದ್ದೆಯಲ್ಲಿ ಭತ್ತದ ಸಸಿಗಳನ್ನು ಕಾಡಾನೆಗಳು (Elephants) ನಾಶ ಮಾಡಿವೆ. ಹಲವು ದಿನಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈ ಎರಡು ಕಾಡಾನೆಗಳು ಬೀಡುಬಿಟ್ಟಿವೆ.

ಎಲ್ಲೆಲ್ಲಿ ಆನೆ ಸಂಚಾರ?

ಭಾನುವಾರ ಮೇಳಿಗೆ ಬ್ರಹ್ಮನಗುಡ್ಡದ ಕಾಡಿನಿಂದ ಮೃಗವಧೆ ಭಾಗಕ್ಕೆ ತೆರಳಿದ್ದ ಕಾಡಾನೆಗಳು ವಾಪಸಾಗಿವೆ. ಸೋಮವಾರ ಬೆಳಗ್ಗೆ ಕೊನ್ನೆರಿಪುರ ಮೂಲಕ ಮಹಿಷಿ, ದಬ್ಬಣಗದ್ದೆ ಭಾಗದ ಹೆಗ್ಗಾರು ಗುಡ್ಡ ಪ್ರವೇಶಿಸಿ ತೋಟ, ಗದ್ದೆ ಹಾನಿ ಮಾಡಿ ರೈತರಲ್ಲಿ ಆತಂಕ ಮೂಡಿಸಿದ್ದವು.

ಮಂಗಳವಾರ ಬೆಳಗ್ಗೆ ಶಿವಮೊಗ್ಗ ತೀರ್ಥಹಳ್ಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169 ದಾಟಿ ಕುನ್ನಳಿ ಗ್ರಾಮದಲ್ಲಿ ಭತ್ತದ ನಾಶ ಮಾಡಿ ಮಧ್ಯಾಹ್ನದ ವೇಳೆ ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಗದ್ದೆ ಗ್ರಾಮದಲ್ಲಿ ವಿಶ್ರಾಂತಿ ಪಡೆದಿವೆ.

two-wild-Elephants-at-thirthahalli.

ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಕಾಡಾನೆಗಳ ಸಂಚಾರವನ್ನು ತೀವ್ರ ನಿಗಾವಹಿಸಿ ಗಮನಿಸಿದರು.

Kalleshwara-Enterprises.webp

JNNCE-Admission-Advt-scaled

ಇದನ್ನೂ ಓದಿ » ಮೂರು ದಿನದ ಬಳಿಕ ಶವವಾಗಿ ಪತ್ತೆಯಾದ ಸ್ವಾತಿ, ಏನಿದು ಪ್ರಕರಣ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment