ಶಿವಮೊಗ್ಗ: ಮದ್ಯದಂಗಡಿಯೊಂದರ ರೋಲಿಂಗ್ ಶಟರ್ ಮೀಟಿ ತೆಗೆದು 21 ಬಗೆಯ ದುಬಾರಿ ಬೆಲೆಯ (Expensive) ಬ್ರಾಂಡೆಂಡ್ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಲಾಗಿದೆ. ಗೋಪಾಳದ 100 ಅಡಿ ರಸ್ತೆಯಲ್ಲಿರುವ ಚನ್ನಾಂಬಿಕ ವೈನ್ಸ್‌ನಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಅ.4ರ ರಾತ್ರಿ ಅಂಗಡಿ ಮಾಲೀಕ ಬಾಗಿಲು ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ವಾಕಿಂಗ್ ಬಂದಾಗ ರೋಲಿಂಗ್ ಶಟರ್ ಮೀಟಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ದುಬಾರಿ ಬೆಲೆಯ 21 ಬಗೆಯ ಮದ್ಯದ ಬಾಟಲಿಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಇನ್ನು, ಅಂಗಡಿಯಲ್ಲಿದ್ದ ಸಿಸಿಟಿವಿ ಡಿವಿಆರ್ ಕೂಡ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
21 ಬಗೆಯ ಬ್ರಾಂಡೆಡ್ ಮದ್ಯ
ರಾಯಲ್ ಸಲ್ಯೂಟ್, ಚಿವಾಸ್ ರೀಗಲ್, ಜಾನಿ ವಾಕರ್ ಬ್ಲೂ ಲೇಬಲ್, ಅಮೃತ ಫ್ಯೂಷನ್, ಬ್ಲ್ಯಾಕ್ ಅಂಡ್ ವೈಟ್, ಡಾನ್ ಜೆ ಟಕೀಲಾ, ಜಾನಿ ವಾಕರ್, ಬ್ಲ್ಯಾಕ್ ಡಾಗ್, ದಿವಾರ್ಸ್ ವೈಟ್ ಲೇಬಲ್, ರಾಮ್‌ಪುರ್ ಸಿಂಗಲ್ ಮಾಲ್ಟ್ ಸೇರಿದಂತೆ 21 ಬಗೆಯ ಬ್ರ್ಯಾಂಡೆಡ್ ಮದ್ಯದ ಬಾಟಲಿಗಳನ್ನು ಕಳವು ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹1.49 ಲಕ್ಷ ಎಂದು ಅಂದಾಜಿಸಲಾಗಿದೆ.

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?
Expensive Branded Bottles theft
