ಶಿವಮೊಗ್ಗ: ಪ್ರತಿ ದಿನ ₹200 ಮೊತ್ತ ವರ್ಗಾವಣೆ ಮಾಡಿ ನಂಬಿಕೆ ಮೂಡಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹7.84 ಲಕ್ಷ ವಂಚಿಸಲಾಗಿದೆ (Investment).
ಹೇಗಾಯ್ತು ವಂಚನೆ?
ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಪ್ರಕಟವಾದ ಜಾಹಿರಾತು ನಂಬಿ ಶಿವಮೊಗ್ಗದ ಉದ್ಯಮಿಯೊಬ್ಬರು ವಂಚನೆಗೊಳಗಾಗಿದ್ದಾರೆ. ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ ಉದ್ಯಮಿಯನ್ನು ಗ್ರೂಪ್ ಒಂದಕ್ಕೆ ಸೇರಿಸಿಕೊಳ್ಳಲಾಯಿತು. ಮೊದಲಿಗೆ ₹20,000 ಹೂಡಿಕೆ ಮಾಡುವಂತೆ ಸೂಚಿಸಲಾಯಿತು. ಅಂತೆಯೇ ಶಿವಮೊಗ್ಗದ ಉದ್ಯಮಿ ಹೂಡಿಕೆ ಮಾಡಿದ್ದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಪ್ರತಿದಿನ ಬಂತು ₹200 ಹಣ
ಹೂಡಿಕೆ ಮಾಡಿಸಿಕೊಂಡವರು ಉದ್ಯಮಿಯ ಖಾತೆಗೆ ಪ್ರತಿದಿನ ₹200 ಹಣ ವರ್ಗಾಯಿಸುತ್ತಿದ್ದರು. 60 ದಿನದವರೆಗೆ ಹಣ ವರ್ಗಾವಣೆ ಮಾಡಲಾಗಿತ್ತು. ಬಳಿಕ ಉದ್ಯಮಿಗೆ ಮತ್ತಷ್ಟು ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಸಲಾಗಿತ್ತು. ಹಾಗಾಗಿ ಉದ್ಯಮಿ ತನ್ನ ಕುಟುಂಬದವರ ಹೆಸರಿನಲ್ಲಿ ₹7.84 ಲಕ್ಷ ಹೂಡಿಕೆ ಮಾಡಿದ್ದರು. ಆ ಬಳಿಕ ಯಾವುದೇ ಲಾಭ ಬಾರದ ಹಿನ್ನೆಲೆ ಪರಿಶೀಲಿಸಿದಾಗ ವಂಚನೆಯಾಗಿರುವುದು ಅರಿವಾಗಿದೆ.

ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ನಡುರಾತ್ರಿ ಮೈಸೂರು ಬಸ್ ಹತ್ತಿ ಸೀಟಿನಲ್ಲಿ ಕುಳಿತು ಶಾಲು ಹೊದ್ದುಕೊಂಡ ನಂತರ ನರ್ಸ್‌ಗೆ ಕಾದಿತ್ತು ಶಾಕ್