ಶಿವಮೊಗ್ಗದಲ್ಲಿ ರಾಜ ಕಾಲುವೆ ಅವೈಜ್ಞಾನಿಕ ಕಾಮಗಾರಿ, ಸ್ಥಳಕ್ಕೆ ತೆರಳಿ ಸಂಸದ ರಾಘವೇಂದ್ರ ಪರಿಶೀಲನೆ

ಶಿವಮೊಗ್ಗ: ರಾಜ ಕಾಲುವೆಯ (Raja Kaluve) ಅವೈಜ್ಞಾನಿಕ ನಿರ್ಮಾಣದಿಂದಾಗಿ ಮಳೆ ಹೆಚ್ಚಾದ ಸಂದರ್ಭ ವಿವಿಧೆಡೆ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯರ ದೂರಿನ ಹಿನ್ನೆಲೆ ಸಂಸದ ಬಿ.ವೈ.ರಾಘವೇಂದ್ರ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗದ ಸಾಗರ ರಸ್ತೆಯ ದ್ವಾರಕ ಕನ್ವೆನ್ಷನ್‌ ಹಾಲ್‌ ಸಮೀಪ ರಾಜ ಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಮಳೆ ಹೆಚ್ಚಾದರೆ ಕೊಳಚೆ ನೀರು ಗೋಪಾಲಗೌಡ ಬಡಾವಣೆಯ ಮನೆಗಳಿಗೆ ನುಗ್ಗಿ ಹಾನಿ ಉಂಟಾಗುತ್ತಿದೆ. ಈ ಕುರಿತು ಸ್ಥಳೀಯರು ತಿಳಿಸಿದ್ದರಿಂದ ಸಂಸದ ಬಿ.ವೈ.ರಾಘವೇಂದ್ರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಕೊಳಚೆ ನೀರು ಮನೆಗಳಿಗೆ ನುಗ್ಗದ ಹಾಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆ ಕಮಿಷನರ್‌ ಮಾಯಣ್ಣಗೌಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯರು ಸೇರಿ ಹಲವರು ಇದ್ದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

BY-Raghavendra-visits-raja-kaluve-near-dwaraka-convention-hall-in-Shimoga.

ಇದನ್ನೂ ಓದಿ » ಸಾಗರ ತಾಲೂಕಿಗೆ ಮತ್ತೆರಡು ಪೊಲೀಸ್‌ ಠಾಣೆ ಬೇಕು, ಗೃಹ ಸಚಿವರಿಗೆ ಎಂಎಲ್‌ಎ ಮನವಿ

Raja Kaluve

BY-Raghavendra-visits-raja-kaluve-near-dwaraka-convention-hall-in-Shimoga.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment