ರೈಲು ಇಳಿದು ಹಬ್ಬದ ಖುಷಿಯಲ್ಲಿ ನಿಲ್ದಾಣದಿಂದ ಹೊರ ಹೋಗುತ್ತಿದ್ದ ನಾಲ್ವರಿಗೆ ರೈಲ್ವೆ ಪೊಲೀಸರಿಂದ ಶಾಕ್, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಿಷೇಧವಿದ್ದರು ರೈಲಿನಲ್ಲಿ ಪಟಾಕಿ ಸಾಗಿಸಿದ ಆರೋಪದ ಹಿನ್ನೆಲೆ ನಾಲ್ವರ ವಿರುದ್ಧ ಶಿವಮೊಗ್ಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟಾಕಿ (Crackers) ಬಾಕ್ಸ್‌ಗಳನ್ನು ವಶಕ್ಕೆ ಪಡೆದು ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆಪರೇಷನ್‌ ಸಂರಕ್ಷ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು, ಶಿವಮೊಗ್ಗ ನಿಲ್ದಾಣದಲ್ಲಿ ಪಟಾಕಿ ಬಾಕ್ಸ್‌ ಸಹಿತ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ರೈಲಿನಲ್ಲಿ ಪಟಾಕಿ ಸಾಗಣೆ ನಿಷೇಧವಿದೆ. ಹಾಗಿದ್ದು ಪಟಾಕಿ ತಂದಿದ್ದಕ್ಕೆ ನೊಟೀಸ್‌ ನೀಡಿ, ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

251025-case-filed-against-4-members-for-taking-crackers-in-train.webp

ಇದನ್ನೂ ಓದಿ » ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ನೀಡಿದ ಡಾ. ಧನಂಜಯ ಸರ್ಜಿ, ಏನದು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 25, 2025

Leave a Comment