ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ನೀಡಿದ ಡಾ. ಧನಂಜಯ ಸರ್ಜಿ, ಏನದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಜಿಲ್ಲೆಯ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲು ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ‘ಕಾಯಕ ಸೇತು’ ವೆಬ್‌ಸೈಟ್‌ (Jobs Website) ಆರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಬಗೆಯ ಉದ್ಯೋಗದ ಮಾಹಿತಿ ಒಂದೇ ವೇದಿಕೆಯಲ್ಲಿ ದೊರೆಯಲಿದೆ.

ಸಂಸದ ಬಿ.ವೈ.ರಾಘವೇಂದ್ರ ಕಾಯಕ ಸೇತು ವೆಬ್‌ಸೈಟ್‌ ಅನಾವರಣ ಮಾಡಿದರು. ಈ ವೆಬ್‌ಸೈಟ್‌ನಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಉದ್ಯೋಗಾಕಾಂಕ್ಷಿಗಳಿಗೆ ನೆರವು ನೀಡಲಾಗುತ್ತಿದೆ. ಇದು ಉದ್ಯೋಗ ಮತ್ತು ಉದ್ಯೋಗಿಗಳನ್ನು ಅರಸುವವರಿಗೆ ಅನುಕೂಲವಾಗಿದೆ. ಕಾಯಕ ಸೇತು ಹೇಗೆ ಕೆಲಸ ಮಾಡಲಿದೆ? ಇಲ್ಲಿದೆ ಅದರ ಮಾಹಿತಿ. ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಕಾಯಕ ಸೇತು ಬಳಸೋದು ಹೇಗೆ?

point-1ಉದ್ಯೋಗಾಕಾಂಕ್ಷಿಗಳು https://www.kayakasetu.com ವೆಬ್‌ಸೈಟ್‌ಗೆ ಭೇಟಿ ನೀಡಿ ರಿಜಿಸ್ಟರ್‌ ಮಾಡಿಕೊಳ್ಳಬೇಕು. ಇನ್ನು ಪ್ರತಿ ಬಾರಿ ಲಾಗಿನ್‌ ಮಾಡಲು ಜಿ ಮೇಲ್‌ ಮತ್ತು ಪಾಸ್‌ ವರ್ಡ್‌ ಬಳಕೆ ಮಾಡಬೇಕು.

point-2ರಿಜಿಸ್ಟರ್‌ ಆದ ಮೇಲೆ ಸ್ವ ವಿವರ ಅಪ್‌ಲೋಡ್‌ ಮಾಡಬೇಕು. ಇದರಲ್ಲಿ ಶೈಕ್ಷಣಿಕ ಮಾಹಿತಿ, ಕೌಶಲ್ಯದ ಕುರಿತು ಸಂಪೂರ್ಣ ಮಾಹಿತಿ ಇರಬೇಕು. ಈ ಮಾಹಿತಿಗಳನ್ನು AI ತಂತ್ರಾಂಶದ ಮೂಲಕ ಉದ್ಯೋಗದಾತರಿಗೆ ತಲುಪಿಸಲಾಗುತ್ತದೆ.

MLC-Dr-Dhananjaya-Sarji-Kayaka-setu-website

point-3ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆ, ಸ್ಕಿಲ್‌ ಆಧಾರದಲ್ಲಿ ಲಭ್ಯವಿರುವ ಉದ್ಯೋಗಗಳನ್ನು ವೀಕ್ಷಿಸಿ, ಅರ್ಜಿ ಸಲ್ಲಿಸಬಹುದಾಗಿದೆ.

point-4ಶಿವಮೊಗ್ಗ ಜಿಲ್ಲೆಯ ಸಣ್ಣ ಸಂಸ್ಥೆಗಳಿಂದ ಕಾರ್ಖಾನೆಗಳ ತನಕ ಎಲ್ಲ ಬಗೆಯ ಉದ್ಯೋಗಗಳು ಬೆರಳ ತುದಿಯಲ್ಲೆ ದೊರೆಯಲಿದೆ. ಡಾ. ಧನಂಜಯ ಸರ್ಜಿ ಅವರ ಶಾಸಕರ ಕಚೇರಿಯಿಂದಲೆ ಈ ವೆಬ್‌ಸೈಟ್‌ ಕಾರ್ಯನಿರ್ವಹಿಸಲಿದೆ.

ಡಾ. ಧನಂಜಯ ಸರ್ಜಿ ಹೇಳಿದ್ದೇನು?

ವೆಬ್‌ಸೈಟ್‌ ಕುರಿತು ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ಇದು ಉಚಿತ ವೆಬ್‌ಸೈಟ್‌. ಉದ್ಯೋಗ ನೀಡುವವರು, ಉದ್ಯೋಗ ಬಯಸುವವರಿಗೆ ಸೇತುವೆಯಾಗಿ ಕೆಲಸ ಮಾಡುತ್ತದೆ. ವೆಬ್‌ಸೈಟ್‌ನಲ್ಲಿ ಯಾವೆಲ್ಲ ಉದ್ಯೋಗಗಳಿವೆ. ಅವುಗಳಿಗೆ ಅರ್ಹತೆಗಳೇನು, ಮಾನದಂಡವೇನು ಎಂಬ ಅಂಶಗಳಿರುತ್ತವೆ. ಉದ್ಯೋಗಾಕಾಂಕ್ಷಿಗಳು CV ಅಪ್‌ಲೋಡ್ ಮಾಡುತ್ತಿದ್ದಂತೆ ಎಐ ಮೂಲಕ ವಿಶ್ಲೇಷಣೆ ಮಾಡಲಾಗುತ್ತದೆ. ಹತ್ತು ಮಾನದಂಡಗಳಲ್ಲಿ ಎಷ್ಟಕ್ಕೆ ಅರ್ಹತೆ ಇದೆ ಎಂದು ಅದು ತಿಳಿಸುತ್ತದೆ ಎಂದರು.

kayaka setu job portal
ಕಾಯಕ ಸೇತು ವೆಬ್‌ಸೈಟ್‌ ಲೋಕಾರ್ಪಣೆ ಮಾಡಿದ ಸಂಸದ ರಾಘವೇಂದ್ರ.

ಜಿಲ್ಲೆಯಲ್ಲಿ ಉದ್ಯೋಗವಕಾಶ ಹೆಚ್ಚಿಸಲು ವೆಬ್‌ಸೈಟ್‌ ಆರಂಭಿಸಲಾಗಿದೆ. ವೈದ್ಯಕೀಯ, ಫೌಂಡ್ರಿ, ಏಜೆನ್ಸಿ, ಕಾಲೇಜು ಸೇರಿದಂತೆ ಯಾವುದೆ ಉದ್ಯೋಗವಾದರು ಅದಕ್ಕೆ ಇಲ್ಲಿ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳಿಗೆ ಹಂತ ಹಂತವಾಗಿ ಕೌಶಲ್ಯ ಅಭಿವೃದ್ಧಿ ಮಾಡುವ ಉದ್ದೇಶವೂ ಇದೆ ಎಂದು ತಿಳಿಸಿದರು.

ಇದನ್ನೂ ಓದಿ » ‘ನಿಮ್ಮನ್ನು ಅರೆಸ್ಟ್‌ ಮಾಡ್ತೀವಿ’, ನಿಮಗು ಬರಬಹುದು ಇಂತಹ ಫೋನ್‌ ಕರೆ, ಶಿವಮೊಗ್ಗದ ಶಿಕ್ಷಕಿ ಮಾಡಿದ್ದೇನು?

Leave a Comment