ಶಿವಮೊಗ್ಗ ನಗರದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಸಿಟಿ: ನಗರದಲ್ಲಿ (city news) ಬುಧವಾರ ಇಡೀ ದಿನ ಏನೇನೆಲ್ಲ ನಡೆಯಿತು. ಇದಲ್ಲಿ ಕಂಪ್ಲೀಟ್‌ ಸುದ್ದಿ. ಒಂದೇ ಕ್ಲಿಕ್‌ನಲ್ಲಿ ಶಿವಮೊಗ್ಗ ನಗರದ ಸಂಪೂರ್ಣ ಸುದ್ದಿ.

ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ

FATAFAT-NEWS-1ಕೋಟೆ ರಸ್ತೆ: ಬಾಲಕೀಯರ ವಸತಿ ನಿಲಯದ ಟೆರೇಸ್‌ ಮೇಲೆ ವಿದ್ಯಾರ್ಥಿನಿ ವನಿಷಾ (21) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವನಿಷಾ, ಭದ್ರಾವತಿ ತಾಲೂಕು ಗಂಗೂರು ಗ್ರಾಮದವರು. ಡಿವಿಎಸ್‌ ಪದವಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ಓದುತ್ತಿದ್ದರು. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಯಿತು. ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kote-Road-Government-Ladies-Hostel-new.

ಆದಿಚುಂಚನಗಿರಿ ಶಾಖಾ ಮಠದ ವಾರ್ಷಿಕೋತ್ಸವ

FATAFAT-NEWS-2ಶರಾವತಿ ನಗರ: ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ 35ನೇ ವಾರ್ಷಿಕೋತ್ಸವ ನಡೆಯಿತು. ಶ್ರೀ ಅದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Shivamogga Live - Shimoga City News

ಶಿವಮೊಗ್ಗದಲ್ಲಿಯು ಸೂಪರ್‌ ಮೂನ್‌

FATAFAT-NEWS-3ಶಿವಮೊಗ್ಗ: ನಗರದಲ್ಲಿ ಬುಧವಾರ ರಾತ್ರಿ ಸೂಪರ್‌ ಮೂನ್‌ ದರ್ಶನವಾಯಿತು. ಇದು ಈ ವರ್ಷದ ಮೂರನೆಯ ಸೂಪರ್‌ ಮೂನ್.‌ ಭೂಮಿಗೆ ಅತಿ ಸಮೀಪಕ್ಕೆ ಚಂದ್ರ ಆಗಮಿಸಿದ್ದರಿಂದ ದೊಡ್ಡ ಗಾತ್ರದಲ್ಲಿ ಚಂದ್ರ ಕಾಣಿಸುತ್ತಿದ್ದ. ಸೂಪರ್‌ ಮೂನ್‌ ಕಣ್ತುಂಬಿಕೊಂಡ ಹಲವರು ತಮ್ಮ ಮೊಬೈಲ್‌ಳಲ್ಲಿ ಚಂದ್ರನನ್ನ ಸೆರೆ ಹಿಡಿದರು.

Shivamogga Live - Shimoga City News

ಮೈ ಸ್ಕೂಲ್‌ನಲ್ಲಿ ರಾಜ್ಯೋತ್ಸವ ಸಂಭ್ರಮ

FATAFAT-NEWS-4ಅಚ್ಚುತರಾವ್‌ ಬಡಾವಣೆ: ಇಲ್ಲಿನ ಮೈ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮಕ್ಕಳು ಕರ್ನಾಟಕ, ಕನ್ನಡದ ಕುರಿತು ತಿಳಿಸಲಾಯಿತು. ವಿವಿಧ ಕನ್ನಡದ ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿದರು. ಶಾಲೆಯ ಟ್ರಸ್ಟಿಗಳು, ಸಿಬ್ಬಂದಿ ಇದ್ದರು.

Shivamogga Live - Shimoga City News

ಶಿವಮೊಗ್ಗದಲ್ಲಿ ಮೂರು ದಿನ ನಾಟಕೋತ್ಸವ

FATAFAT-NEWS-5ಪತ್ರಿಕಾ ಭವನ: ಸಮುದಾಯ ಸಂಘಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಕುವೆಂಪು ರಂಗಮಂದಿರದಲ್ಲಿ ನ.7, 8 ಮತ್ತು 9ರಂದು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನ.7ರಂದು ಸಂಜೆ 6.30ಕ್ಕೆ ನೆನಪು ತಂಡದಿಂದ ಮಾಯಾದೀಪ, ನ.8ರಂದು ಡಾ. ಸಾಸ್ವೆಹಳ್ಳಿ ಸತೀಶ್‌ ನಿರ್ದೇಶನದ ನೀರೊಳಗಿನ ಕಿಚ್ಚು, ನ.9ರಂದು ಮೂಡುಬಿದಿರೆಯ ಆಳ್ವಾಸ್‌ ರಂಗಶಿಕ್ಷಣ ಕೇಂದ್ರದಿಂದ ಚಾರುವಸಂತ ನಾಟಕ ಪ್ರದರ್ಶಿಸಲಾಗುತ್ತದೆ ಎಂದು ಸಮುದಾಯ ಶಿವಮೊಗ್ಗದ ಅಧ್ಯಕ್ಷ ಡಾ. ಕೆ.ಜಿ.ವೆಂಕಟೇಶ್‌ ತಿಳಿಸಿದರು.

Shivamogga Live - Shimoga City News

ನ.9ರಂದು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

FATAFAT-NEWS-6ಪತ್ರಿಕಾ ಭವನ: ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಅಂಗವಾಗಿ ಅಶ್ವಥನಗರದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ನ.9ರಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಎಲ್‌ಕೆಜಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ವಿವೇಕ್‌ ಫೌಂಡೇಶನ್‌ ಉಪಾಧ್ಯಕ್ಷ ಎಸ್‌.ಎಸ್.ಸತೀಶ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Shivamogga Live - Shimoga City News

ಚಿಕಿತ್ಸೆಗೆ ನೆರವು ನೀಡುವಂತೆ ಮನವಿ

FATAFAT-NEWS-7.ಪತ್ರಿಕಾ ಭವನ: ಭದ್ರಾವತಿ ತಾಲೂಕು ಶಂಕರಘಟ್ಟ ಸಮೀಪದ ತಾವರಘಟ್ಟದ ವೆಳ್ಳಿಯಮ್ಮ ಎಂಬುವವರ ಪುತ್ರ 9 ವರ್ಷ ಮದನ್‌ ಅತಿ ವಿರಳವಾದ ಚರ್ಮ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನ ಚಿಕಿತ್ಸೆಗೆ ಸಾರ್ವಜನಿಕರು ನೆರವು ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ವೆಳ್ಳಿಯಮ್ಮ  ಮನವಿ ಮಾಡಿದ್ದಾರೆ. 8431931532 ನಂಬರ್‌ಗೆ ಗೂಗಲ್‌ ಪೇ ಅಥವಾ ಫೋನ್‌ ಪೇ ಮಾಡಬಹುದು ಎಂದು ತಿಳಿಸಿದ್ದಾರೆ.

Shivamogga Live - Shimoga City News

ಕೆಎಂಎಫ್‌ ನಿರ್ದೇಶಕರಾಗಿ ಮಂಜುನಾಥಗೌಡ

FATAFAT-NEWS-8ಮಾಚೇನಹಳ್ಳಿ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದಿಂದ (ಶಿಮುಲ್)‌ ಕರ್ನಾಟಕ ಹಾಲು ಮಂಡಳಿಗೆ (ಕೆಎಂಎಫ್‌) ಆರ್.ಎಂ.ಮಂಜುನಾಥ ಗೌಡ ಅವರನ್ನು ನಿರ್ದೆಶಕರಾಗಿ ಆಯ್ಕೆ ಮಾಡಲಾಗಿದೆ. ಶಿಮುಲ್‌ ಆಡಳಿತ ಮಂಡಳಿ ಸಭೆಯಲ್ಲಿ ಮಂಜುನಾಥ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಶಿಮುಲ್‌ ಅಧ್ಯಕ್ಷ ವಿ‍ದ್ಯಾಧರ ಮತ್ತು ನಿರ್ದೇಶಕರು ಅಭಿನಂದನೆ ಸಲ್ಲಿಸಿದರು.

Shivamogga Live - Shimoga City News

ಇದನ್ನೂ ಓದಿ » 120 ಇನ್ಸ್‌ಪೆಕ್ಟರ್‌ಗಳು ವರ್ಗ, ಶಿವಮೊಗ್ಗಕ್ಕೆ ರಾಘವೇಂದ್ರ ಕಂಡಿಕೆ ವಾಪಸ್‌, ಯಾರೆಲ್ಲ ಎಲ್ಲೆಲ್ಲಿಗೆ ವರ್ಗವಾಗಿದ್ದಾರೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 6, 2025

Leave a Comment