ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿಕಾರಿಪುರ: ಹೋರಿ ಬೆದರಿಸುವ ಹಬ್ಬದ ವೇಳೆ ಹೋರಿಯೊಂದು ಓಡುವ ಭರದಲ್ಲಿ ಕೆರೆಗೆ ಹಾರಿ ಮೃತಪಟ್ಟಿದೆ. ಶಿಕಾರಿಪುರ ತಾಲೂಕು ಹುಲಗಿನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹಬ್ಬದಲ್ಲಿ ಘಟನೆ ಸಂಭವಿಸಿದೆ.
ಹುಲಗಿನಕೊಪ್ಪದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಿ ಹಬ್ಬದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಅನೇಕ ಹೋರಿಗಳು ಪಾಲ್ಗೊಂಡಿದ್ದವು. ಹೋರಿಗಳಿಗೆ ಕೊಬ್ಬರಿ ಹಾಗೂ ಬಲೂನ್‌ಗಳನ್ನು ಕಟ್ಟಿ ಅಖಾಡಕ್ಕೆ ಬಿಡಲಾಗುತ್ತಿತ್ತು. ಈ ವೇಳೆ ನಾಗರಾಜ್ ಜಂಬೂರು ಎಂಬುವರ ಮುಗಳಿಕೊಪ್ಪದ ಮುತ್ತು ಎಂಬ ಹೆಸರಿನ ಹೋರಿ ಹುಲಗಿನಕಟ್ಟೆ ಕೆರೆಗೆ ಹಾರಿದೆ. ಕೂಡಲೆ ಕೆರೆಗೆ ಇಳಿದು ಹೋರಿಯನ್ನು ದಡಕ್ಕೆ ಎಳೆದು ತರಲಾಯಿತು.
ದಡಕ್ಕೆ ತರುವಷ್ಟರಲ್ಲಿ ಹೋರಿ ಕೊನೆಯುಸಿರೆಳೆದಿತ್ತು. ಹೋರಿ ಮಾಲೀಕರು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯೋಜಕರು ಬೇಲಿ ಹಾಕಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಹೋರಿ ಸಾವಿನ ಘಟನೆಯು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಇದನ್ನೂ ಓದಿ » ಟ್ಯಾಂಕರ್ ಡಿಕ್ಕಿ, ಅರಣ್ಯ ಕಾವಲುಗಾರ ಸಾವು, ಎಲ್ಲಿ? ಹೇಗಾಯ್ತು ಘಟನೆ?
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






