ಶಿವಮೊಗ್ಗದಲ್ಲಿ ಪಾರ್ಕಿಂಗ್‌ ಸಮಸ್ಯೆ, ರಸ್ತೆಗಿಳಿದ ರಕ್ಷಣಾಧಿಕಾರಿ, ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಬ್ರೇಕ್‌, ಏನೇನಾಯ್ತು?

ಶಿವಮೊಗ್ಗ: ಸಿಟಿಯಲ್ಲಿ ಪಾರ್ಕಿಂಗ್‌ ಸಮಸ್ಯೆ ಬಿಗಡಾಯಿಸಿದ್ದು ಮುಕ್ತಿ ನೀಡಲು ಸಂಚಾರ ಠಾಣೆ ಪೊಲೀಸರು ಮುಂದಡಿ ಇಟ್ಟಿದ್ದಾರೆ. ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳ ಕಾರಣಕ್ಕೆ ಪಾರ್ಕ್‌ ಬಡಾವಣೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಇಲ್ಲಿ ಶಾಶ್ವತವಾಗಿ ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಕ್ಷಣಾಧಿಕಾರಿಯಿಂದ ಪರಿಶೀಲನೆ

ಮಥುರಾ ಪ್ಯಾರಡೈಸ್‌ ಪಕ್ಕದ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗವೆ ಸಿಗುವುದಿಲ್ಲ. ಅಲ್ಲದೆ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದಾಗಿ ಸಂಚಾರ ದಟ್ಟಣೆಯು ಹೆಚ್ಚು. ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸಾರ್ವಜನಿಕರ ಜೊತೆಗೆ ಸಮಾಲೋಚನೆ ಮಾಡಿದರು.

ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರವೇನು?

ಪಾಯಿಂಟ್‌ 1: ಪಾರ್ಕ್‌ ಬಡಾವಣೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ನಿಗದಿತ ಕನ್ಸರ್‌ವೆನ್ಸಿಗಳಲ್ಲಿ ಅಭಿವೃದ್ಧಿಪಡಿಸಿರುವ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಕು.

sp mithun kumar ips visit park extension - ಪಾರ್ಕಿಂಗ್

ಪಾಯಿಂಟ್‌ 2: ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್‌ ಆಸ್ಪತ್ರೆ, ಸರ್ಜಿ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲು ಆಸ್ಪತ್ರೆಗೆ ಬರುವವರು ತಮ್ಮ ವಾಹನಗಳನ್ನು ಅಕ್ಕಪಕ್ಕದ ಕನ್ಸರ್‌ವೆನ್ಸಿಗಳಲ್ಲೇ ನಿಲ್ಲಿಸಬೇಕು.

ಪಾಯಿಂಟ್‌ 3: ಕನ್ಸರ್‌ವೆನ್ಸಿಗಳಲ್ಲಿ ವಾಹನಗಳ ನಿಲುಗಡೆ ಮಾಡಿದರೆ ಪಾರ್ಕ್‌ ಬಡಾವಣೆ, ದುರ್ಗಿಗುಡಿ, ರಾಘವೇಂದ್ರ ಸ್ವಾಮಿ ಮಠದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ.

ರಸ್ತೆ ಉದ್ದಕ್ಕೂ ಬ್ಯಾರಿಕೇಡ್‌

ಕಂಡ ಕಂಡಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ ತಡೆಯೊಡ್ಡಲು ಸಂಚಾರ ಪೊಲೀಸರು ಶುಕ್ರವಾರ ರಸ್ತೆ ಉದ್ದಕ್ಕೂ ಬ್ಯಾರಿಕೇಡ್‌ಗಳಲ್ಲು ಅಳವಡಿಸಿ ಟೇಪ್‌ ಕಟ್ಟಿದ್ದರು. ಹಾಗಾಗಿ ವಾಹನ ಸವಾರರು ಅನಿವಾರ್ಯವಾಗಿ ಕನ್ಸರ್‌ವೆನ್ಸಿಗಳಲ್ಲೇ ತಮ್ಮ ವಾಹನಗಳನ್ನು ಪಾರ್ಕಿಂಗ್‌ ಮಾಡಬೇಕಾಯಿತು.

ಇಲ್ಲಿದೆ ವಿಡಿಯೋ

ಇದನ್ನೂ ಓದಿ » ಆಟೋದಲ್ಲಿ ಬಂತು ಐದು ಬಾಳೆಗೊನೆ, ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಶಾಕ್‌, ಆಗಿದ್ದೇನು?

ಪರಿಶೀಲನೆ ವೇಳೆ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ದೇವರಾಜ್‌,  ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ಸ್ವಪ್ನ, ಪಿಎಸ್‌ಐ ಭಾರತಿ, ಪೂರ್ವ ಸಂಚಾರ ಠಾಣೆ ಪಿಎಸ್‌ಐ ಅಕ್ಬರ್‌ ಮುಲ್ಲಾ, ಪಿಎಸ್‌ಐ ಶಿವಣ್ಣನವರ್‌, ಸಿಬ್ಬಂದಿ ಇದ್ದರು.

ಇದನ್ನೂ ಓದಿ » ದಿಢೀರ್‌ ಕಾರ್ಯಾಚರಣೆ, 24 ಮಂದಿಯನ್ನು ಠಾಣೆಗೆ ಕರೆದೊಯ್ದ ಪೊಲೀಸ್‌, ನಾಲ್ವರ ವಿರುದ್ಧ ಕೇಸ್‌

Shimoga-Parking-menace-SP-visits-park-extension.

Leave a Comment