ಶಿವಮೊಗ್ಗದ ಲಾಡ್ಜ್‌ ರೂಮಿನಲ್ಲಿ ಬೆಂಕಿ ಕೇಸ್‌, ಪುರುಷ, ಮಹಿಳೆ ವಿರುದ್ಧವೇ ಕೇಸ್‌, ಏನೇನಿದೆ ದೂರಿನಲ್ಲಿ?

ಶಿವಮೊಗ್ಗ: ಲಾಡ್ಜ್‌ನ ರೂಂನಲ್ಲಿ ಬೆಂಕಿಯಿಂದಾಗಿ ಮಹಿಳೆಗೆ ಗಂಭೀರ ಗಾಯ ಪ್ರಕರಣ ಸಂಬಂಧ ಲಾಡ್ಜ್‌ನ ಸೂಪರ್‌ ವೈಸರ್‌ ದೂರು ನೀಡಿದ್ದಾರೆ. ರೂಂನಲ್ಲಿದ್ದ ಪುರುಷ ಮತ್ತು ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ನ.18ರಂದು ಶಿವಮೊಗ್ಗದ ಲಾಡ್ಜ್‌ನ ರೂಂನಲ್ಲಿ ಬೆಂಕಿಗೆ ಮಹಿಳೆ ಗಂಭೀರ ಗಾಯಗೊಂಡಿದ್ದರು. ಜೊತೆಗಿದ್ದ ವ್ಯಕ್ತಿಗು ಗಾಯವಾಗಿತ್ತು. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ದೂರಿನಲ್ಲಿ ಏನಿದೆ?

‘ಗಿರೀಶ್‌ ಎಂಬುವವರು ನ.18ರಂದು ಮಧ್ಯಾಹ್ನ ಒಬ್ಬರೆ ಲಾಡ್ಜ್‌ಗೆ ಬಂದು ರೂಂ ನಂಬರ್‌ 211ರಲ್ಲಿ ಉಳಿದಿದ್ದರು. ರಾತ್ರಿ 11 ಗಂಟೆಗೆ ಕೊಠಡಿಯಲ್ಲಿ ಕಿರುಚಿದಂತೆ ಶಬ್ದ ಕೇಳಿಸಿತು. ಕೂಡಲೆ ಸೂಪರ್‌ ವೈಸರ್‌ ಮತ್ತು ರೂಂ ಬಾಯ್‌ ಅಲ್ಲಿಗೆ ಹೋಗಿದ್ದಾರೆ. ಆಗ ಕೊಠಡಿಯಿಂದ ಗಿರೀಶ್‌ ಮತ್ತು ಮಹಿಳೆ ಹೊರಗೆ ಬಂದಿದ್ದಾರೆ. ಮಹಿಳೆಯ ದೇಹಕ್ಕೆ ಸುಟ್ಟ ಗಾಯವಾಗಿತ್ತು. ಗಿರೀಶ್‌ ಕೈಗು ಸುಟ್ಟ ಗಾಯವಾಗಿತ್ತು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Nanjappa Hospital Advertisement

ಇದನ್ನೂ ಓದಿ » ದಿಢೀರ್‌ ಕಾರ್ಯಾಚರಣೆ, 24 ಮಂದಿಯನ್ನು ಠಾಣೆಗೆ ಕರೆದೊಯ್ದ ಪೊಲೀಸ್‌, ನಾಲ್ವರ ವಿರುದ್ಧ ಕೇಸ್‌

‘ಲಾಡ್ಜ್‌ ಸಿಬ್ಬಂದಿ ವಿಚಾರಿಸಿದಾಗ ಬೆಂಕಿ ತಗುಲಿ ಮೈ, ಕೈ ಸುಟ್ಟಿದೆ ಎಂದಷ್ಟೆ ತಿಳಿಸಿ, ಗಿರೀಶ್‌ ಅವರ ಕಾರಿನಲ್ಲೆ ಮಹಿಳೆಯನ್ನು ಕರೆದೊಯ್ದರು ಎಂದು ತಿಳಿಸಲಾಗಿದೆ. ಲಾಡ್ಜ್‌ ಸಿಬ್ಬಂದಿ ಕೊಠಡಿ ಹೊರಗಿನಿಂದಲೇ ಪರಿಶೀಲಿಸಿದಾಗ ರೂಂ ಒಳಗೆ ಗೋಡೆಗಳು ಕಪ್ಪಾಗಿದ್ದವು, ಬೆಡ್‌ ಶೀಟ್‌ ಸುಟ್ಟು ಹೊಗಿತ್ತು. ಸುಮಾರು ₹25,000 ನಷ್ಟವಾಗಿದೆ’ ಎಂದು ಆರೋಪಿಸಲಾಗಿದೆ.

ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನು ಓದಿ » ಶಿವಮೊಗ್ಗದಲ್ಲಿ ಪಾರ್ಕಿಂಗ್‌ ಸಮಸ್ಯೆ, ರಸ್ತೆಗಿಳಿದ ರಕ್ಷಣಾಧಿಕಾರಿ, ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಬ್ರೇಕ್‌, ಏನೇನಾಯ್ತು?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment