ಆರು ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನ, 50ಕ್ಕು ಹೆಚ್ಚು ಕಲಾವಿದರು ಭಾಗಿ

ಸಾಗರ: ಲಾಲ್‌ ಬಹದ್ದೂ‌ರ್ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ನ.23ರಂದು ವಿದ್ವಾನ್ ದತ್ತಮೂರ್ತಿ ಭಟ್ ಅವರ ನಾಟ್ಯಶ್ರೀ ಕಲಾ ತಂಡ ಮತ್ತು ಶ್ರೀ ಗುರು ಯಕ್ಷಗಾನ ಮಂಡಳಿ ಸಾಗರ – ಶಿವಮೊಗ್ಗ ಅವರಿಂದ ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ‘ಯಕ್ಷ ಷಡಾಖ್ಯಾನಮ್’ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ದುಶ್ಯಂತ – ಶಾಕುಂತಲಾ, ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಮಹಾತ್ಮೆ, ದ್ರುಪದ ಗರ್ವಭಂಗ, ಲವಕುಶ, ರಾಜಾ ಉಗ್ರಸೇನ, ಚಕ್ರವ್ಯೂಹ ಹೀಗೆ ಆರು ಕಥಾನಕಗಳನ್ನು ಪ್ರಸಿದ್ಧ ಕಲಾವಿದರು ಪ್ರಸ್ತುತ ಪಡಿಸುವರು. ಸಾಗರದಲ್ಲಿ ಪ್ರಥಮ ಬಾರಿಗೆ ಆರು ಪೌರಾಣಿಕ ಪ್ರಸಂಗಗಳಲ್ಲಿ 50ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ » ಮಾಜಿ ಸೈನಿಕರ ನೇಮಕಕ್ಕೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Leave a Comment