ವಿನೋಬನಗರದಲ್ಲಿ ತರಕಾರಿ ಮಾರಾಟ ಮಾಡಿ ತೆರಳುತ್ತಿದ್ದ ಮಹಿಳೆಗೆ ಆಗಂತುಕನಿಂದ ಆಘಾತ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ತರಕಾರಿ ಮಾರಾಟ ಮಾಡಿ ಮನೆಗೆ ನಡೆದು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಸಿದ ಕಳ್ಳರು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಶಿವಮೊಗ್ಗ ವಿನೋಬನಗರ 16ನೇ ಕ್ರಾಸ ತಿರುವಿನಲ್ಲಿ ಘಟನೆ ಸಂಭವಿಸಿದೆ.

ಹೊನ್ನಮ್ಮ ಎಂಬುವವರು ಎಪಿಎಂಸಿ ಮುಂಭಾಗ ಮರದ ಅಡಿ ಕುಳಿತು ತರಕಾರಿ ವ್ಯಾಪಾರ ಮಾಡುತ್ತಾರೆ. ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ಮಧ್ಯಾಹ್ನ ಮನೆಗೆ ನೆಡದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಹೊನ್ನಮ್ಮ ಅವರ ಹಿಂದಿನಿಂದ ಬಂದ ಯುವಕನೊಬ್ಬ ಕೊರಳಲಿದ್ದ ಸರ ಕಸಿದುಕೊಂಡು ಓಡಿಹೋಗಿದ್ದಾನೆ. ಸ್ವಲ್ಪ ದೂರದಲ್ಲಿ ಮತ್ತೊಬ್ಬ ಯುವಕ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ. ಬೈಕಿನಲ್ಲಿ ಇಬ್ಬರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

₹1.73 ಲಕ್ಷ ಮೌಲ್ಯದ 58 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ವಿದ್ಯಾನಗರ ರಸ್ತೆ ಡೇಂಜರ್‌, ಇನ್ನಷ್ಟು ಜೀವ ಹೋಗುತ್ತೆ ಹುಷಾರ್‌, ಇಲ್ಲಿ ಏನೇನೆಲ್ಲ ಸಮಸ್ಯೆ ಇದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment