ಸ್ವಂತ ಹಣದಲ್ಲಿ ಹೆದ್ದಾರಿಯ ಅಪಾಯಕಾರಿ ಗುಂಡಿ ಮುಚ್ಚಿದ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು

ಶಿವಮೊಗ್ಗ: ಸಾಲು ಸಾಲು ಅಪಘಾತಗಳು. ಬಿದ್ದು ಗಾಯಗೊಂಡವರ ನರಳಾಟ. ಜಸ್ಟ್‌ ಮಿಸ್‌ ಆದವರ ಆತಂಕದ ನುಡಿ. ಪ್ರತಿದಿನ ಇದನ್ನು ಗಮನಿಸುತ್ತಿದ್ದ ಸಹ್ಯಾದ್ರಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತಮ್ಮದೇ ಖರ್ಚಿನಲ್ಲಿ ಸಿಮೆಂಟ್‌, ಜೆಲ್ಲಿ, ಮರಳು ತಂದು ಬೃಹತ್‌ ಗುಂಡಿ ಮುಚ್ಚಿದ್ದಾರೆ.

ಬಿ.ಹೆಚ್‌.ರಸ್ತೆಯಲ್ಲಿ ಸಹ್ಯಾದ್ರಿ ಕಾಲೇಜು ಮುಂಭಾಗ ಬೃಹತ್‌ ಗುಂಡಿಯಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಪ್ರತಿದಿನ ಅಪಘಾತ ಸಂಭವಿಸುತಿತ್ತು. ವಿದ್ಯಾರ್ಥಿಗಳ ಕಣ್ಮುಂದೆಯೇ ಇಂತಹ ಘಟನೆ ಸಂಭಿವಿಸಿದ್ದು ಅವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿತು.

ಸಿಮೆಂಟು, ಮರಳು, ಮೇಸ್ತ್ರಿಯ ನೆರವು

ಸಹ್ಯಾದ್ರಿ ಕಾಲೇಜಿನ ಎಂ.ಬಿ.ಎ ವಿಬಾಗದ ವಿದ್ಯಾರ್ಥಿಗಳಾದ ತೇಜಸ್‌, ಸುನಿಲ್‌, ದೀಪಕ್‌, ವಾಸು ಎಂಬುವವರು ಗುಂಡಿ ಮುಚ್ಚಲು ಮುಂದಾದರು. ಮತ್ತೂರು ಕ್ರಾಸ್‌ನಲ್ಲಿರುವ ಎಳನೀರು ವ್ಯಾಪಾರಿ ಹರೀಶ್‌, ಗಾರೆ ಕೆಲಸದ ಮೇಸ್ತ್ರಿ ನರಸಿಂಹಮೂರ್ತಿ ಅವರ ನೆರವು ಪಡೆದು ಗುಂಡಿ ಮುಚ್ಚಿದ್ದಾರೆ. ವಿದ್ಯಾರ್ಥಿಗಳು ತಮ್ಮದೇ ಸ್ವಂತ ಖರ್ಚಿನಲ್ಲಿ ಸಿಮೆಂಟ್‌, ಜೆಲ್ಲಿ, ಎಂ ಸ್ಯಾಂಡ್‌ ತರಿಸಿದ್ದಾರೆ. ತಾವೇ ಸಿಮೆಂಟ್‌, ಜೆಲ್ಲಿ, ಮರಳು ಮಿಕ್ಸ್‌ ಮಾಡಿ, ಮೇಸ್ತ್ರಿ ನರಸಿಂಹಮೂರ್ತಿ ಅವರ ನೆರವಿನಲ್ಲಿ ಗುಂಡಿ ಮುಚ್ಚಿದ್ದಾರೆ.

ವಿದ್ಯಾರ್ಥಿಗಳ ಕಾರ್ಯಕ್ಕೆ ಜನ ಮೆಚ್ಚುಗೆ

ಎಂ.ಆರ್‌.ಎಸ್‌. ಸರ್ಕಲ್‌ನಿಂದ ತುಂಗಾ ನದಿ ಹೊಳೆ ಸೇತುವೆವರೆಗೆ ಬಿ.ಹೆಚ್‌.ರಸ್ತೆಯಾದ್ಯಂತ ಭಾರಿ ಗುಂಡಿಗಳಾಗಿವೆ. ಇವುಗಳಿಂದಾಗಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಗುಂಡಿಗಳನ್ನು ಮುಚ್ಚುವಂತೆ ಜನರು ನಿತ್ಯ ಮನವಿ ಮಾಡುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ವಹಿಸಿಲ್ಲ. ಈಗ ವಿದ್ಯಾರ್ಥಿಗಳು ತಮ್ಮ ಹಣದಲ್ಲಿ ಗುಂಡಿ ಮುಚ್ಚಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಹೇಳಿದ್ದೇನು? ಇಲ್ಲಿದೆ ವಿಡಿಯೋ

ಇದನ್ನೂ ಓದಿ » ತಾಯಿ ಜೊತೆ ಬೈಕ್‌ನಲ್ಲಿ ತೆರಳುವಾಗ ಜೋರಾಗಿ ಕೂಗಿದ ಬಾಲಕಿ, ನಿಲ್ಲಿಸಿ ನೋಡಿದಾಗ ಕಾದಿತ್ತು ಆಘಾತ

sahyadri-college-Students-Close-the-pot-hole-at-BH-Road

Leave a Comment