NEWS HIGHLIGHTS
ಶಿವಮೊಗ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಂತೋಷ್.ಎಂ.ಎಸ್ ಅವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದರು. ಈ-ಚಲಾನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿ ಪರಿಶೀಲಿಸಿದರು.
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2,00,508 ಪ್ರಕರಣಗಳು ದಾಖಲಾಗಿದ್ದು ಅದರ ದಂಡದ ಒಟ್ಟು ಮೊತ್ತ ₹16,33,91,250. ಈ ಪೈಕಿ ಒಟ್ಟು 1,527 ಈ ಚಲನ್ ಪ್ರಕರಣಗಳು ಮುಕ್ತಾಯಗೊಂಡಿದೆ. ಒಟ್ಟು ₹6,14,750 ದಂಡ ಪಾವತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ » ಗೋಪಿ ಸರ್ಕಲ್ನಿಂದ ಕಾವಡಿಗಳ ಮೆರವಣಿಗೆ, ಮಹಿಳೆಯರಿಂದ ದೀಪಗಳ ಉತ್ಸವ, ಯಾವಾಗ?
ಸಾರ್ವಜನಿಕರು ದಂಡದ ಮೊತ್ತದಲ್ಲಿ ಶೇ.50 ಕಡಿಮೆ ಮೊತ್ತದ ಹಣವನ್ನು ಪಾವತಿಸಲು ಸರ್ಕಾರ ಆವಕಾಶ ಮಾಡಿಕೊಟ್ಟಿದೆ. ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಹಾಗೂ ಪೂರ್ವ ಸಂಚಾರಿ ಪೊಲೀಸ್ ಠಾಣೆ ಮತ್ತು ಭದ್ರಾವತಿ ನಗರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಬಹುದು. ರಸ್ತೆ, ವಿವಿಧ ವೃತ್ತಗಳಲ್ಲಿ ಸಂಚಾರಿ ಠಾಣೆ ಸಹಾಯಕ ಪೊಲೀಸ್ ನಿರೀಕ್ಷಕರ ಬಳಿ ಇರುವ ಈ.ವಿ.ಎಂ ಯಂತ್ರಗಳ ಮೂಲಕವು ಸಾರ್ವಜನಿಕರು ದಂಡದ ಮೊತ್ತವನ್ನು ಪಾವತಿ ಮಾಡಲು ಅನುಕೂಲ ಮಾಡಲಾಗಿದೆ. ಈ ಅವಕಾಶದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ನ್ಯಾ. ಸಂತೋಷ್ ತಿಳಿಸಿದ್ದಾರೆ.