ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ 60ನೇ ವರ್ಷದ ವಜ್ರಮಹೋತ್ಸವದ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಬಂಗಾರಪ್ಪ, ನಗರದ ಹೃದಯ ಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ 1965ರಲ್ಲಿ ಚಿಕ್ಕದಾಗಿ ಪ್ರಾರಂಭಗೊಂಡು ಇಂದು ಹೆಮ್ಮರವಾಗಿ ಬೆಳೆದಿದೆ. 1990ರಲ್ಲಿ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡಿತ್ತು. ಈಗ ವಜ್ರ ಮಹೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದೇವೆ ಎಂದರು.

ಡಿ.20 ಮತ್ತು 21ರಂದು ವಜ್ರಮಹೋತ್ಸವ ಆಚರಣೆ ಮಾಡಲಾಗುವುದು. ಡಿ.20ರಂದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಏರ್ಪಡಿಸಲಾಗಿದೆ ಮತ್ತು ಹಳೆಯ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಶಾಲಾ ಆವರಣದಲ್ಲಿ ಸಂಜೆ ಮನೋರಂಜನೆ ಹಾಗೂ ಔತಣಕೂಟ ಕಾರ್ಯಕ್ರಮವಿದೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಳೆಯ ವಿದ್ಯಾರ್ಥಿಗಳಾದ ಡಾ. ಧನಂಜಯ ಸರ್ಜಿ, ಹೆಚ್.ಸಿ. ಯೋಗೀಶ್, ಬಳ್ಳೇಕೆರೆ ಸಂತೋಷ್, ಹರ್ಷಾ, ರಾಕೇಶ್ ಡಿಸೋಜಾ, ಕಿರಣ್, ಮರಿಯಪ್ಪ, ವಿಲಿಯಂ ಡಿಸೋಜಾ, ವಿನ್ಸೆಂಟ್, ಫ್ಯಾಟ್ರಿಕ್, ಸೆಕ್ರೇಡ್ ಹಾರ್ಟ್‌ನ ಫಾ. ಕ್ಲಿಫರ್ಡ್ ರೋಷನ್ ಪಿಂಟೋ, ಫಾ. ಸ್ಪ್ಯಾನಿ ಡಿಸೋಜಾ, ಫಾ. ಫ್ರಾನ್ಸಿಸ್ ನರೋನ, ಕಿರಣ್ ಫೆರ್ನಾಂಡಿಸ್, ಮುಖ್ಯ ಶಿಕ್ಷಕ ಹೂಬರ್ಟ್ ಮಿರಾಂಡಾ ಸೇರಿದಂತೆ ಹಲವರಿದ್ದರು.
LATEST NEWS
- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು















