ಶಿವಮೊಗ್ಗ: ಪಿಇಎಸ್ ಸಂಸ್ಥೆಯಲ್ಲಿ ಈವರೆಗೆ ಆಡಳಿತ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಡಾ. ನಾಗರಾಜ. ಆರ್ ಅವರನ್ನು ಪಿಇಎಸ್ ಸಂಸ್ಥೆಯ ಕುಲಸಚಿವರಾಗಿ (ರಿಜಿಸ್ಟ್ರಾರ್) ಪದೋನ್ನತಿ ನೀಡಲಾಗಿದೆ.
2008 ರಲ್ಲಿ ಪಿಇಎಸ್ ಸಂಸ್ಥೆಯ ಎಂಬಿಎ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ನೇಮಕ ಗೊಂಡು 2011ರಲ್ಲಿ ಅದನ್ನು ಸಂಶೋಧನಾ ಕೇಂದ್ರವಾಗಿ ಮಾರ್ಪಡಿಸಿದರು. ಅವರ ಬೋಧನಾ ಕ್ಷೇತ್ರದಲ್ಲಿ ಮಾರ್ಕೆಟಿಂಗ್, ಮ್ಯಾ ನೇಜ್‌ಮೆಂಟ್ ಮತ್ತು ಸಂಯೋಜಿತ ಕೋರ್ಸ್‌ಗಳು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ‘ಶಿವಮೊಗ್ಗಕ್ಕೆ ಇನ್ನೂ ₹100 ಕೋಟಿ ಬರಬೇಕಿತ್ತು’, ಸಂಸದ ರಾಘವೇಂದ್ರ ಆಕ್ರೋಶ, ಆಗಿದ್ದೇನು?
ಕೈಗಾರಿಕಾ, ಶೈಕ್ಷಣಿಕ, ಸಂಶೋಧನೆ ಮತ್ತು ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಅನುಭವ ಹೊಂದಿರುವ ಡಾ. ನಾಗರಾಜ್, 1994 ರಲ್ಲಿ ಕೆಬಿಎಲ್ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬೆಂಗಳೂರಿನ ಎಎಂಸಿ, ಶಿವಮೊಗ್ಗದ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯವನ್ನು ನಿರ್ವಹಿಸಿದ್ದರು.

