BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ

ಶಿವಮೊಗ್ಗ: ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ದೇಶಾದ್ಯಂತ ಇಂಡಿಗೋ ವಿಮಾನಯಾನ (Indigo Flight) ಸೇವೆ ವ್ಯತ್ಯಯವಾಗಿದೆ. ಕಳೆದ ಮೂರು ದಿನದಲ್ಲಿ ಒಂದು ಸಾವಿರಕ್ಕು ಹೆಚ್ಚು ವಿಮಾನ ಹಾರಾಟ ರದ್ದಾಗಿದೆ ‍(Flight Cancel) ಎಂದು ವರದಿಯಾಗಿದೆ. ಈ ಮಧ್ಯೆ ಶಿವಮೊಗ್ಗಕ್ಕು ಬಿಸಿ ತಟ್ಟಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಧ್ಯೆ ಪ್ರತಿದಿನ ಇಂಡಿಗೋ ವಿಮಾನ ಸೇವೆ ಇದೆ. ಆದರೆ ಸೇವೆಯಲ್ಲಿ ವ್ಯತ್ಯಯದಿಂದಾಗಿ ಇಂದು ಇಂಡಿಗೋ ವಿಮಾನ ಸಂಚಾರ ರದ್ದಾಗಿದೆ. ಇವತ್ತು 60 ಮಂದಿ ಪ್ರಯಾಣಿಕರು ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ತೆರಳಲು ಟಿಕೆಟ್‌ ಬುಕ್‌ ಮಾಡಿದ್ದರು ಎಂದು ತಿಳಿದು ಬಂದಿದೆ.

Indigo-ATR-Flight-in-Shivamogga-Airport-Shimoga-Live-news.webp

ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ, ಯಾಕೆ?

ತಡವಾಗಿ ಬಂದು ಹೋಯ್ತು

ಇನ್ನು, ಗುರವಾರ ಮಧ್ಯಾಹ್ನ ಶಿವಮೊಗ್ಗಕ್ಕೆ ಆಗಮಿಸಬೇಕಿದ್ದ ಇಂಡಿಗೋ ವಿಮಾನ ಸಂಜೆ ವೇಳೆಗೆ ಆಗಮಿಸಿತ್ತು ಎಂದು ಮೂಲಗಳು ತಿಳಿಸಿವೆ. ಸಂಜೆ 4.30ಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನ ಬಳಿಕ ಬೆಂಗಳೂರಿಗೆ ತೆರಳಿತ್ತು. ಇವತ್ತು ವಿಮಾನ ರದ್ದಾಗಿದೆ.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!