ದೇಶದ ಟಾಪ್‌ 10 ನಗರಗಳ ಪಟ್ಟಿಯಲ್ಲಿ ಶಿವಮೊಗ್ಗಕ್ಕೆ 6ನೇ ಸ್ಥಾನ, ಮೈಸೂರು, ಬೆಂಗಳೂರಿಗಿಂತಲು ಉತ್ತಮ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ನವದೆಹಲಿ: ಭಾರತದ ಟಾಪ್‌ 10 (Top 10 Cities) ಸ್ವಚ್ಛ ಗಾಳಿಯ ನಗರದಲ್ಲಿ ಕರ್ನಾಟಕದ 6 ನಗರಗಳು ಸ್ಥಾನ ಪಡೆದಿವೆ. ಈ ಪೈಕಿ ಶಿವಮೊಗ್ಗ ಸಿಟಿ ಟಾಪ್‌ 6ರಲ್ಲಿ ಇದೆ.

ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಎನರ್ಜಿ ಆಂಡ್‌ ಕ್ಲೀನ್‌ ಏರ್‌ (CREA) ನವೆಂಬರ್‌ 2025ರ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಸ್ವಚ್ಛ ಗಾಳಿ ಮತ್ತು ಕುಲುಷಿತ ವಾತಾವರಣ ಹೊಂದಿರುವ ಟಾಪ್‌ 10 ನಗರಗಳನ್ನು ಗುರುತಿಸಲಾಗಿದೆ. ಈ ಪೈಕಿ, ಕರ್ನಾಟಕದ ಆರು ನಗರಗಳಲ್ಲಿ ಕಳೆದ ತಿಂಗಳು ಸ್ವಚ್ಛ ಗಾಳಿ ಇತ್ತು ಎಂದು ತಿಳಿಸಲಾಗಿದೆ.

Shimoga-top-6-in-Air-quality-index

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳು

1. ಶಿಲ್ಲಾಂಗ್ (ಮೇಘಾಲಯ), 2. ಗ್ಯಾಂಗ್ಟಕ್ (ಸಿಕ್ಕಿಂ), 3. ಪಾಲ್ಕಲೈಪೆರೂರ್ (ತಮಿಳುನಾಡು), 4. ಕೊಪ್ಪಳ (ಕರ್ನಾಟಕ), 5. ಚಾಮರಾಜನಗರ (ಕರ್ನಾಟಕ), 6. ಶಿವಮೊಗ್ಗ (ಕರ್ನಾಟಕ), 7. ತಿರುವನಂತಪುರಂ (ಕೇರಳ), 8. ಗದಗ (ಕರ್ನಾಟಕ), 9. ಮೈಸೂರು (ಕರ್ನಾಟಕ), 10. ಬಾಗಲಕೋಟೆ (ಕರ್ನಾಟಕ).

ಇದನ್ನೂ ಓದಿ » ಕೋಟೆ ದೇವಸ್ಥಾನದಲ್ಲಿ 30 ದಿನ ಸೀತಾಕಲ್ಯಾಣ ಶತಮಾನೋತ್ಸವ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?

225 ನಗರಗಳಲ್ಲಿ ಸಮೀಕ್ಷೆ

ಭಾರತದ 225 ನಗರಗಳನ್ನು ಪರಿಗಣಿಸಲಾಗಿತ್ತು. ಅದರಲ್ಲಿ 114 ನಗರಗಳು ಉತ್ತಮ ವಾಯು ಮಾನದಂಡ ಪೂರೈಸಿದೆ. ಉಳಿದ ನಗರಗಳಲ್ಲಿ (Top 10 Cities) ಉಸಿರಾಡಲು ಉತ್ತಮ ಗಾಳಿ (Air Pollution) ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ದೇಶದ ಅತಿ ಕಲುಷಿತ ನಗರವಾಗಿದೆ. ನೋಯ್ಡಾ, ಬಹಾದ್ದೂರ್‌ಗಢ, ದೆಹಲಿ, ಹಾಪುರ್, ಗ್ರೇಟರ್ ನೋಯ್ಡಾ, ಬಾಘಪತ್, ಸೋನಿಪತ್, ಮೇರಠ್‌, ರೋಹ್ಟಕ್ ಟಾಪ್‌ 10 ಕಲುಷಿತ ಗಾಳಿ ಹೊಂದಿರುವ ನಗರಗಳಾಗಿವೆ.

bh-road-in-Shimoga-shivappanayaka-statue

ಶಿವಮೊಗ್ಗದ ಗಾಳಿ ಹೇಗಿದೆ?

ಸ್ವಚ್ಛ ಗಾಳಿ ಹೊಂದಿರುವ ನಗರಗಳ ಪೈಕಿ ದೇಶದ 225 ನಗರಗಳ ಪೈಕಿ ಶಿವಮೊಗ್ಗ ನಗರ ಟಾಪ್‌ 6ನೇ ಸ್ಥಾನದಲ್ಲಿದೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AIR QUALITY INDEX) ಶಿವಮೊಗ್ಗ ನಗರ 30 ಪಾಯಿಂಟ್‌ ಹೊಂದಿದೆ. ಇದು ಕನಿಷ್ಠ ಅಥವಾ ಯಾವುದೇ ಅಪಾಯವಿಲ್ಲದ ಗಾಳಿ ಎಂದು ಸೂಚಿಸುತ್ತದೆ ಎಂದು CREA ವರದಿಯಲ್ಲಿ ತಿಳಿಸಿದೆ. ಶುದ್ಧ ಗಾಳಿ ಹೊಂದಿರವ ಟಾಪ್‌ 1 ನಗರ ಶಿಲ್ಲಾಂಗ್‌ನ ವಾಯು ಗುಣಮಟ್ಟ ಸೂಚ್ಯಂಕ 24 ಪಾಯಿಂಟ್‌ ಇದೆ. ಇನ್ನು, ಕಲುಷಿತ ನಗರಗಳ ಸೂಚ್ಯಂಕ 61 ರಿಂದ 90 ಪಾಯಿಂಟ್‌ಗಳಲ್ಲಿದೆ. ಇವುಗಳಿಗೆ ಹೋಲಿಸಿದರೆ ಶಿವಮೊಗ್ಗ ನಗರದಲ್ಲಿ ಸ್ವಚ್ಛ ಮತ್ತು ಶುದ್ಧ ಗಾಳಿ ಇದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 8, 2025

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

Leave a Comment