ರೈತನ ಪತ್ನಿಗೆ ಫೋನ್‌ ಮಾಡಿದ ‘ಬ್ಯಾಂಕ್‌ ಮ್ಯಾನೇಜರ್‌’, ಆಮೇಲೆ ಕಾದಿತ್ತು ಶಾಕ್, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಬ್ಯಾಂಕ್ ಮ್ಯಾನೇಜರ್ ಎಂದು ನಟಿಸಿದ ವಂಚಕರು ಎಟಿಎಂ ಕಾರ್ಡ್ ನವೀಕರಣದ ಹೆಸರಿನಲ್ಲಿ ರೈತರೊಬ್ಬರ (Farmer Scammed) ಖಾತೆಯಿಂದ ₹2,84,321 ಹಣವನ್ನು ಆನ್‌ಲೈನ್ ಮೂಲಕ ವಂಚಿಸಿದ್ದಾರೆ.

ನವೆಂಬರ್ 26ರಂದು ಅಪರಿಚಿತರು ಶಿವಮೊಗ್ಗ ಜಿಲ್ಲೆಯ ರೈತರೊಬ್ಬರ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ ಎಟಿಎಂ ಕಾರ್ಡ್ ಅವಧಿ ಮುಗಿದಿದೆ. ಕೂಡಲೆ ನವೀಕರಿಸಬೇಕು ಎಂದು ತಿಳಿಸಿದ್ದಾರೆ. ಪತ್ನಿ ವಿಷಯ ತಿಳಿಸಿದ ನಂತರ ರೈತ, ‘ಬ್ಯಾಂಕ್‌ ಮ್ಯಾನೇಜರ್‌ʼ ಕರೆ ಮಾಡಿದ್ದ ನಂಬರ್‌ಗೆ ಕರೆ ಮಾಡಿದ್ದರು. ಆಗ ವಂಚಕರು ಡೆಬಿಟ್ ಕಾರ್ಡ್ ಮತ್ತು ವೈಯಕ್ತಿಕ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ಪಡೆದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.‌

Online-Fraud-In-Shimoga

ಇದನ್ನೂ ಓದಿ » ₹67 ಲಕ್ಷ ಕಳೆದುಕೊಂಡ ಶಿವಮೊಗ್ಗದ 22 ವರ್ಷದ ಯುವತಿ, ಆಗಿದ್ದೇನು?

ಎಟಿಎಂ ಕಾರ್ಡ್ ನವೀಕರಣಕ್ಕೆ ನಾಮಿನಿ ಮಾಡಬೇಕೆಂದು ರೈತನನ್ನು ನಂಬಿಸಿದ್ದರು. ಅಲ್ಲದೆ ರೈತನ ಮೊಬೈಲ್‌ಗೆ ಬಂದ 13 ಓಟಿಪಿಗಳನ್ನು ಪಡೆದು, ಅವರ ಬ್ಯಾಂಕ್ ಖಾತೆಯಿಂದ ಒಟ್ಟು ₹2,84,321 ಹಣವನ್ನು ವರ್ಗಾಯಿಸಿಕೊಂಡಿದ್ದರು. ಬ್ಯಾಂಕ್‌ ಮ್ಯಾನೇಜರ್‌ ಹೆಸರಿನಲ್ಲಿ ಕರೆ ಮಾಡಿ ತನ್ನನ್ನು ವಂಚಿಸಿದ್ದಾರೆ ಎಂದು ಅರಿವಾದ ಹಿನ್ನೆಲೆ ರೈತ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆ ದೂರು ನೀಡಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 9, 2025

Leave a Comment