ಶಿವಮೊಗ್ಗದಲ್ಲಿ ಡಿ.28ರಿಂದ ಸರಳ ತಂತ್ರಗಳು, ಕ್ರಿಯಾಯೋಗ ಶಿಬಿರ, ನೋಂದಣಿ ಅರಂಭ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಆರ್ಯವೈಶ್ಯ ಸಂಸ್ಕೃತಿ ಸದನದಲ್ಲಿ ಡಿ.28ರಿಂದ ಜನವರಿ 7 ರವರೆಗೆ ಸರಳ ತಂತ್ರಗಳು ಹಾಗೂ ಕ್ರಿಯಾಯೋಗ (Kriya Yoga) ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರದ ಸಂಚಾಲಕ ಮೃತ್ಯುಂಜಯ ತಿಳಿಸಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃತ್ಯುಂಜಯ, ಹಿಮಾಲಯದ ತಪಸ್ವಿಗಳು ಶ್ರೀ ತೇಜಾನಂತ ಆರೂಢ ಅವಧೂತರು ಈ ಶಿಬಿರದ ಸಾನಿಧ್ಯವಹಿಸುವರು. ಆತ್ಮಬಂಧುಗಳಿಗಾಗಿ ಮಾತ್ರ 12 ದಿನ ಶಿಬಿರ ನಡೆಯಲಿದೆ. ಯಾವುದೇ ಶುಲ್ಕವಿರುವುದಿಲ್ಲ. ಶಿಬಿರದಲ್ಲಿ ಭಾಗವಹಿಸುವ ಮೊದಲು ಅವಧೂತರ 10 ಅಮೃತವಾಣಿ, ಸತ್ಸಂಗಗಳ ಮಾಲಿಕೆಯನ್ನ ಆಲಿಸಿರಬೇಕು. ಯೂ ಟ್ಯೂಬ್‌ನಲ್ಲಿದ್ದು, ವಾಟ್ಸಾಪ್ ಗುಂಪು ಮಾಡಿ ಕಳುಹಿಸಿಕೊಡಲಾಗುವುದು ಎಂದರು.

-kriya-yoga-in-Shimoga.

ಶಿಬಿರದಲ್ಲಿ ಪಾಲ್ಗೊಳ್ಳುವವರು ಪ್ರತಿದಿನ ಬೆಳಗ್ಗೆ 5.45ಕ್ಕೆ ಧ್ಯಾನ ಮಂದಿರದಲ್ಲಿ ಆಸೀನರಾಗಬೇಕು. 7 ಗಂಟೆಗೆ ಸತ್ಸಂಗ ಮುಗಿಯುತ್ತದೆ. ನಂತರ ನಿಶ್ಯಬ್ದತೆ ಮತ್ತು ಮೌನದಿಂದ ತೆರಳಬೇಕು. ಫೋನ್‌ಗಳನ್ನು ಸತ್ಸಂಗದ ಸಮಯದಲ್ಲಿ ಬಳಸಬಾರದು. ಈ ಸತಂಗದ ಸಮ ಸಾಧನಾ ಪರ್ವದ ಶಿಬಿರವು ಶ್ರದ್ಧೆ, ಮೌನ ಮತ್ತು ಭಕ್ತಿಯ ಮಾರ್ಗವಾಗಿರುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯವಾಗಿರುತ್ತದೆ. ಡಿಸೆಂಬ‌ರ್10 ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ಬರಲ್ಲ, ಯಾವ್ಯಾವ ದಿನ?

ನೋಂದಣಿಗೆ ಮತ್ತು ಹೆಚ್ಚಿನ ಮಾಹಿತಿಗೆ ಮೃತ್ಯುಂಜಯ 9448078970, ರವಿ ಪಾಟೀಲ 9590615659, ಅರುಣಕುಮಾರ್ 9663774839, ಅಶೋಕ್ ಕುಮಾರ್ 8147164153 ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರವಿಪಾಟೀಲ್, ಬೆನಕಪ್ಪ, ಪ್ರಕಾಶ್ ಗುಬ್ಬಿ ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment